ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್: ಒಮ್ಮತಕ್ಕೆ ಬಾರದ ಮಿತ್ರರು, ಮತ್ತೆ ಪ್ರಕ್ಷುಬ್ಧತೆ?
PTI
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ವಜಾಮಾಡಿರುವ ನ್ಯಾಯಾಧೀಶರ ಮರುನೇಮಕದ ಕುರಿತಂತೆ ಒಮ್ಮತಕ್ಕೆ ಬರಲು ಆಡಳಿತಾರೂಢ ಮೈತ್ರಿಕೂಟದ ಮುಖ್ಯಸ್ಥರು ವಿಫಲವಾಗಿದ್ದು, ಆರೇ ವಾರಗಳಲ್ಲಿ ನೂತನ ಸರಕಾರಕ್ಕೆ ಸಂಚಕಾರ ಒದಗುವುದೇ ಎಂಬ ಭೀತಿ ಎದುರಾಗಿದೆ.

ಲಂಡನ್‌ನಲ್ಲಿ ವಾರಾಂತ್ಯದ ಪೂರ್ಣ ಮಾತುಕತೆ ನಡೆದರೂ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿಲ್ಲ. ನ್ಯಾಯಾಧೀಶರ ಮರುನೇಮಕಕ್ಕೆ ಸ್ವಯಂ ಹೇರಿಕೊಂಡಿರುವ ಮೇ 12ರ ಗಡುವು ತಲುಪಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್ ಸರಕಾರಕ್ಕೆ ನೀಡಿರುವ ಬೆಂಬಲ ವಾಪಾಸು ಪಡೆಯುವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.

ಷರೀಫ್ ಅವರ ಪಿಎಂಎಲ್-ಎನ್‌ ಪಕ್ಷದ ಪ್ರತಿನಿಧಿಗಳು ಮೈತ್ರಿ ಸರಕಾರದಲ್ಲಿ ಮುಂದುವರಿಯಬೇಕೇ ಎಂಬ ಕುರಿತು ಚರ್ಚಿಸಲು ಸೋಮವಾರ ಸಭೆ ಸೇರಲಿದ್ದಾರೆ. ಪಕ್ಷವು ಇದೀಗಾಗಲೆ ಸಂಪುಟ ತೊರೆಯವ ಬೆದರಿಕೆ ಹಾಕಿದೆ.

ಏತನ್ಮಧ್ಯೆ, ತೃಪ್ತಿಕರ ಅಂತ್ಯಕ್ಕಾಗಿ ಇನ್ನೂ ಪ್ರಯತ್ನಿಸುತ್ತಿರವುದಾಗಿ ಪಿಪಿಪಿ ಪಕ್ಷ ಪರ ಸಂಧಾನಕಾರರಲ್ಲೊಬ್ಬರಾದ ಹುಸೇನ್ ಹಕ್ಕಿನಿ ಹೇಳಿದ್ದಾರೆ.

ಮಾತುಕತೆಯಲ್ಲಿ ಪಾಲ್ಗೊಂಡಿರುವ ನವಾಜ್ ಅವರ ಸಹೋದರ ಶಾಬಾಜ್ ಅವರು, ಉಭಯ ಬಣಗಳು ಒಪ್ಪಂದವೊಂದಕ್ಕೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಹೇಳಿದ್ದಾರೆ. ನಾವು ಸರಕಾರಕ್ಕೆ ಪ್ರತಿ ವಿಚಾರದಲ್ಲಿ ಬೆಂಬಲ ನೀಡುತ್ತೇವೆ. ಸರಕಾರವನ್ನು ಅಸ್ಥಿರಗೊಳಿಸಲು ಅನುವು ನೀಡುವುದಿಲ್ಲ ಎಂದಿರುವ ಅವರು ರಾಷ್ಟ್ರಕ್ಕೆ ಶುಭ ಸುದ್ದಿ ನೀಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ಮತ್ತಷ್ಟು
ದಾರ್ಫುರ್: ರಾಜತಾಂತ್ರಿಕ ಸಂಬಂಧ ಕಡಿತ
ಸರಬ್ಜಿತ್‌ಗೆ ಕ್ಷಮೆ : ಗಿಲಾನಿ ಸುಳಿವು
ಮ್ಮಾನ್ಮಾರ್: ಭಾರೀ ಪ್ರಮಾಣದ ಹಿಂಸಾಚಾರ
ದಾವೂದ್‌ನನ್ನು ಭಾರತಕ್ಕೆ ಒಪ್ಪಿಸಲು ಸಿದ್ದ-ಗಿಲಾನಿ
ಸರಬ್‌ಜಿತ್ ಕ್ಷಮಾದಾನ: ಗಿಲಾನಿ ಸುಳಿವು
ಭಾರತೀಯ ಸಂಜಾತೆ ಪ್ರಥಮ ಮಹಿಳಾ ಮೇಯರ್