ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಯಾಗರಕ್ಕೆ ತೆರಳುತ್ತಿದ್ದ 6 ಭಾರತೀಯರ ಅಪಮೃತ್ಯು
ವಾರಾಂತ್ಯದಲ್ಲಿ ನಯಾಗರ ಜಲಪಾತ ವೀಕ್ಷಣೆಗೆ ತಮ್ಮ ಕುಟುಂಬ ಸಮೇತ ತೆರಳುತ್ತಿದ್ದ ಭಾರತೀಯ ಕಂಪ್ಯೂಟರ್ ಪ್ರೋಗಾಮರ್‌ಗಳನ್ನು ಕರೆದೊಯ್ಯುತ್ತಿದ್ದ ವ್ಯಾನೊಂದು ಅಪಘಾತಕ್ಕೀಡಾಗಿದ್ದು, ವ್ಯಾನಿನಲ್ಲಿದ್ದ ಏಳು ಮಂದಿಯಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರ್ಘಟನೆ ಶನಿವಾರ ಸಂಭವಿಸಿದ್ದು, ಹೈವೇಯಿಂದ ಐದು ಕಿಲೋಮೀಟರ್ ದೂರದಲ್ಲಿ ಪೆನ್ಸಿಲ್ವೇನಿಯಾ-ಒಹಿಯೋ ಸಮೀಪ ದುರ್ದೈವಿ ವ್ಯಾನು ಎದುರಿನಿಂದ ಬರುತ್ತಿದ್ದ ಕಾರಿಗೆ ಬಡಿದು ಉರುಳಿ ತಲೆಕೆಳಗಾಗಿ ಬಿದ್ದಿತ್ತು.

ಅಪಘಾತದಲ್ಲಿ ಕೌಶಿಕ್ ದೇವ್(26), ಮನೋಜ್ ಜಾರಿಯ(35), ಅವರ ಪತ್ನಿ ಮಿಲಿ ಜಾರಿಯಾ(28), ನಿತಿನ್ ಅಗರ್ವಾಲ್(29). ಅವರ ಪತ್ನಿ ಸ್ವಾತಿ ಅಗರ್ವಾಲ್(25) ಮತ್ತು ಶುಭಂ ಚೌಧುರಿ(24) ಸಾವಿಗೀಡಾಗಿದ್ದಾರೆ.

ಮಿನಿವ್ಯಾನ್‌ನಲ್ಲಿದ್ದ ನಿತಿನ್ ಗುಪ್ತಾ(28) ಮಾತ್ರ ಬದುಕುಳಿದಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.
ಮತ್ತಷ್ಟು
ಪಾಕ್: ಒಮ್ಮತಕ್ಕೆ ಬಾರದ ಮಿತ್ರರು, ಮತ್ತೆ ಪ್ರಕ್ಷುಬ್ಧತೆ?
ದಾರ್ಫುರ್: ರಾಜತಾಂತ್ರಿಕ ಸಂಬಂಧ ಕಡಿತ
ಸರಬ್ಜಿತ್‌ಗೆ ಕ್ಷಮೆ : ಗಿಲಾನಿ ಸುಳಿವು
ಮ್ಮಾನ್ಮಾರ್: ಭಾರೀ ಪ್ರಮಾಣದ ಹಿಂಸಾಚಾರ
ದಾವೂದ್‌ನನ್ನು ಭಾರತಕ್ಕೆ ಒಪ್ಪಿಸಲು ಸಿದ್ದ-ಗಿಲಾನಿ
ಸರಬ್‌ಜಿತ್ ಕ್ಷಮಾದಾನ: ಗಿಲಾನಿ ಸುಳಿವು