ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನದಲ್ಲಿ ಭೀಕರ ಭೂಕಂಪ: ಕನಿಷ್ಠ 7,600 ಸಾವು
ಬೀಜಿಂಗ್: ಚೀನದಲ್ಲಿ ಸಂಭವಿಸಿರುವ ಭೀಕರ ಭೂಕಂಪದಿಂದಾಗಿ ಕನಿಷ್ಠ 7,600 ಮಂದಿ ಹತರಾಗಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ.ಇದಲ್ಲದೆ, ಮೂರಂತಸ್ತಿನ ಶಾಲೆಯೊಂದು ಕುಸಿದಿದ್ದು, ಸುಮಾರು 900 ಕ್ಕೂ ಹೆಚ್ಚು ಮಕ್ಕಳು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಚೀನಾದ ಸರಕಾರಿ ಸುದ್ದಿ ಸಂಸ್ಥೆ ಝ್ಸಿನುವಾ ವರದಿ ಮಾಡಿದೆ. ಇನ್ನೊಂದು ಶಾಲೆ ಕುಸಿದ ಪರಿಣಾಮ ನಾಲ್ಕು ಮಕ್ಕಳು ಅಸು ನೀಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆಗಳಿವೆ.

ರಿಕ್ಟರ್ ಮಾಪನದಲ್ಲಿ 7.8 ತೀವ್ರತೆಯ ಭೂಕಂಪ ಸೋಮವಾರ ಸಂಭವಿಸಿದೆ. ಸಿಚುವಾನ್ ಪ್ರದೇಶ ತೀವ್ರ ಹಾನಿಗೀಡಾಗಿದೆ. ಸುದ್ದಿ ಸಂಸ್ಥೆಯು, ಜುಯಾನ್ ಪಟ್ಟಣದ ಹೈಸ್ಕೂಲ್ ಕುಸಿದಿದೆ ಎಂದು ಹೇಳಿದೆ.

ಈ ಭೂಕಂಪವನ್ನು ಅತ್ಯಂತ ಅಪಾಯಕಾರಿ ಎಂದು ಬಣ್ಣಿಸಿರುವ ಅಮೆರಿಕ ಭೂಗರ್ಭ ಸರ್ವೇಕ್ಷಣಾಲಯದ ತಜ್ಞ ಬ್ರೂಸ್ ಪ್ರೇಸ್‌ಗ್ರೇವ್ ಅವರು, ಈ ಭೂಕಂಪವು ಅತ್ಯಂತ ಜನಸಂಖ್ಯೆಯ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಹಾನಿಯುಂಟುಮಾಡುವ ಸಾಂದ್ರತೆ ಹೊಂದಿದೆ ಎಂದು ಹೇಳಿದ್ದಾರೆ.

ಚೀನದ ಸಿಚುವಾನ್ ಪ್ರಾಂತ್ಯದ ಪೂರ್ವ ಪ್ರದೇಶವಾದ, ಸುಮಾರು 20 ಲಕ್ಷ ಜನಸಂಖ್ಯೆಯ ಚೆಂಗ್ಡುವಿನಿಂದ 62 ಕಿಲೋ ಮೀಟರ್ ದೂರದಲ್ಲಿ ಭೂಕಂಪವು ಕೇಂದ್ರೀಕೃತವಾಗಿದೆ. ಈ ಪ್ರದೇಶದಿಂದ 950 ಮೈಲಿ ದೂರದಲ್ಲಿರುವ ಬೀಜಿಂಗ್‌ನಲ್ಲಿಯೂ ಭೂಮಿ ಕಂಪಿಸಿದೆ.

ಸ್ಥಳೀಯ ಕಾಲಮಾನ ಅಪರಾಹ್ನ 2.28ರ ವೇಳೆಗೆ ಭೂಕಂಪ ಉಂಟಾಗಿದ್ದು, ನಾಶ ನಷ್ಟದ ಕುರಿತು ನಿಖರ ವರದಿಗಳು ಲಭ್ಯವಾಗಿಲ್ಲ.
ಪ್ರಧಾನಿ ವೆನ್ ಜಿಯಬಾವೋ ಅವರು ಭೂಕಂಪ ಪ್ರದೇಶಕ್ಕೆ ಧಾವಿಸಿದ್ದಾರೆ. ಅಧ್ಯಕ್ಷ ಹು ಜಿಂತಾವೋ ಅವರು ಸಮಗ್ರ ರೀತಿಯ ಪರಿಹಾರ ಕಾರ್ಯಕ್ಕೆ ಆದೇಶ ನೀಡಿದ್ದಾರೆ ಎಂದು ಝ್ಸಿನುವಾ ಹೇಳಿದೆ.
ಮತ್ತಷ್ಟು
ನಯಾಗರಕ್ಕೆ ತೆರಳುತ್ತಿದ್ದ 6 ಭಾರತೀಯರ ಅಪಮೃತ್ಯು
ಪಾಕ್: ಒಮ್ಮತಕ್ಕೆ ಬಾರದ ಮಿತ್ರರು, ಮತ್ತೆ ಪ್ರಕ್ಷುಬ್ಧತೆ?
ದಾರ್ಫುರ್: ರಾಜತಾಂತ್ರಿಕ ಸಂಬಂಧ ಕಡಿತ
ಸರಬ್ಜಿತ್‌ಗೆ ಕ್ಷಮೆ : ಗಿಲಾನಿ ಸುಳಿವು
ಮ್ಮಾನ್ಮಾರ್: ಭಾರೀ ಪ್ರಮಾಣದ ಹಿಂಸಾಚಾರ
ದಾವೂದ್‌ನನ್ನು ಭಾರತಕ್ಕೆ ಒಪ್ಪಿಸಲು ಸಿದ್ದ-ಗಿಲಾನಿ