ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಪಾಕಿಸ್ತಾನ ಸಂಬಂಧ ವೃದ್ಧಿಗೆ ಒಬಾಮಾ ಕರೆ  Search similar articles
ಭಾರತ ಮತ್ತು ಪಾಕಿಸ್ತಾನ ನಡುವಿನ ನಂಬಿಕೆಯನ್ನು ಬಲಪಡಿಸಲು ಅಮೆರಿಕವು ಪ್ರಯತ್ನಿಸಿದಲ್ಲಿ, ಅಫ್ಘಾನಿಸ್ತಾನದಲ್ಲಿನ ಉಗ್ರಗಾಮಿಗಳ ವಿರುದ್ಧ ಅಮೆರಿಕ ನೇತೃತ್ವದ ದಾಳಿಯು ಸುಗಮವಾಗಬಹುದು ಎಂದು ಅಮೆರಿಕ ಡೆಮಕ್ರಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ಅಭಿಪ್ರಾಯಪಟ್ಟಿದ್ದಾರೆ.

ತನ್ನ ವಿದೇಶಿ ವಾಸ್ತವ ಅನ್ವೇಷಿ ಪ್ರವಾಸದ ವೇಳೆ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿರುವ ಒಬಾಮಾ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಫ್ಘಾನಿಸ್ತಾನ ಕೇಂದ್ರರಂಗವಾಗಿದ್ದು, ಪರಿಸ್ಥಿತಿಯು ತುರ್ತು ಮತ್ತು ಅಪಾಯಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಭಾರತದ ನಡುವಿನ ವೈರತ್ವವನ್ನು ಕಡಿಮೆಗೊಳಿಸಿ ಸಂಬಂಧವನ್ನು ವೃದ್ಧಿಗೊಳಿಸಿದಲ್ಲಿ ಉಗ್ರಗಾಮಿಗಳ ವಿರುದ್ಧದ ಹೋರಾಟವು ಸುಗಮವಾಗಬಹುದು ಎಂದು ಒಬಾಮಾ ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಭಾರತದ ನಡುವೆ ಸೂಕ್ತ ರೀತಿಯ ಮಾತುಕತೆಯು ಈ ವರೆಗೆ ನಡೆಯದಿದ್ದು, ಎರಡೂ ದೇಶಗಳು ವೈರತ್ವವನ್ನು ತ್ಯಜಿಸಿ ತಮ್ಮ ಸಂಬಂಧವನ್ನು ವೃದ್ಧಿಸಿದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟದ ಅಮೆರಿಕದ ಒತ್ತಡವು ಕೊಂಚ ತಗ್ಗಬಹುದು ಎಂದು ಒಬಾಮಾ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ನೆಲ್ಸನ್ ಮಂಡೇಲಾರಿಗೆ ಗಾಂಧಿ ಶಾಂತಿ ಪ್ರಶಸ್ತಿ
ವಿಶ್ವಾಸಮತ ಗೆಲುವು: ಯುಪಿಎಗೆ ಅಮೆರಿಕ ಅಭಿನಂದನೆ
ಬೀಜಿಂಗ್: ಹೋಟೆಲ್‌ಗಳಿಂದ ದರ ಕಡಿತ
ಸರಕಾರ ರಚನೆಗೆ ಮಾವೋವಾದಿಗಳ ನಕಾರ
ಪಿಎಂಎಲ್-ಎನ್‌ನಿಂದ ಪಿಪಿಪಿಗೆ ಆಗಸ್ಟ್ 15ರ ಗಡುವು
ಜುಲೈ 23ರಂದು ನೇಪಾಳ ಪ್ರಥಮ ಅಧ್ಯಕ್ಷರಿಂದ ಪ್ರಮಾಣವಚನ