ಭಾರತ ಮತ್ತು ಇರಾನಿನ ಬಹು ಬಿಲಿಯನ್ ಯೋಜನೆಗೆ ಭಾರತವು ಸಿದ್ಧಗೊಂಡಿದ್ದಲ್ಲಿ, ಈ ಯೋಜನೆಯು ಹೆಚ್ಚು ಆರ್ಥಿಕಪ್ರಜ್ಞೆಯನ್ನು ಉಂಟುಮಾಡುತ್ತದೆ ಎಂದು ಪಾಕಿಸ್ತಾನವು ತಿಳಿಸಿದ್ದು, ಅಲ್ಲದೆ, ಇದು ಸ್ಥಿರತೆಯ ಪ್ರೇರಣೆಯಾಗಿಯೂ ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದೆ.
ಐಪಿಐ ಅನಿಲ ಕೊಳವೆ ಯೋಜನೆಗೆ ಭಾರತವು ಸಿದ್ಧವಿದ್ದಲ್ಲಿ ಇದು ಹೆಚ್ಚು ಆರ್ಥಿಕ ವಿವೇಚನೆಯನ್ನು ಉಂಟುಮಾಡುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ ತಿಳಿಸಿದ್ದಾರೆ.
ಇಂಧನ ಕೊರತೆಯನ್ನು ಎದುರಿಸುತ್ತಿರುವ ಭಾರತಕ್ಕೆ ಅನಿಲ ಕೊಳವೆ ಯೋಜನೆಯಿಂದ ಪ್ರಯೋಜನವಾಗುವುದರೊಂದಿಗೆ, ಉಭಯ ದೇಶಗಳ ನಡುವೆ ವಿಶ್ವಾಸ ನಿರ್ಮಾಣ ಕಾರ್ಯವನ್ನು ಇದು ಮಾಡುತ್ತದೆ ಎಂದು ಖುರೇಶಿ ಅಭಿಪ್ರಾಯಪಟ್ಟಿದ್ದಾರೆ.
ಇರಾನಿನಿಂದ ಪಾಕಿಸ್ತಾನವಾಗಿ ಭಾರತಕ್ಕೆ ತಲುಪುವ ಬಹು ಮಿಲಿಯನ್ ಡಾಲರ್ ವೆಚ್ಚದ ಅನಿಲ ಕೊಳವೆ ಯೋಜನೆಯನ್ನು ಮುಂದುವರಿಸಲು ಪಾಕಿಸ್ತಾನವು ಬಯಸುತ್ತಿದ್ದು, ಇದು ಈ ಪ್ರದೇಶದ ಸ್ಥಿರತೆದೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
|