ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನೋಬೆಲ್ ಪ್ರಶಸ್ತಿ ವಿಜೇತ ರಶ್ಯಾ ಸಾಹಿತಿ ನಿಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಬೆಲ್ ಪ್ರಶಸ್ತಿ ವಿಜೇತ ರಶ್ಯಾ ಸಾಹಿತಿ ನಿಧನ Search similar articles
ಮಾಸ್ಕೋ: ನೋಬೆಲ್ ಪ್ರಶಸ್ತಿ ವಿಜೇತ ರಷ್ಯಾದ ಬಂಡಾಯ ಲೇಖಕ ಅಲೆಕ್ಸಾಂಡರ್ ಸೋಲ್ಝೆನಿಟ್ಸಿನ್ ಅವರು ಭಾನುವಾರ ತಡರಾತ್ರಿ ನಿಧನ ಹೊಂದಿದ್ದಾರೆ. 89ರ ಹರೆಯದ ಅಲೆಕ್ಸಾಂಡರ್ ಅವರು ಸೋವಿಯತ್ ರಶ್ಯಾದ ಸರ್ವಾಧಿಕಾರಿ ಸ್ಟಾಲಿನ್ ಶಿಬಿರಗಳ ಭಯಾನಕತೆಗಳನ್ನು ಜಗತ್ತಿಗೆ ಸಾರಿದ್ದರು.

ರಶ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಅವರು ಅಲೆಕ್ಸಾಂಡರ್ ಸಾವಿಗೆ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಸೋವಿಯತ್‌ನ ಸರ್ವಾಧಿಕಾರಿ ಸ್ಟಾಲಿನ್‌ನನ್ನು ಟೀಕಿಸಿದ ಪ್ರಮಾದಕ್ಕಾಗಿ ಎಂಟು ವರ್ಷಗಳ ಕಾಲ ಸ್ಟಾಲಿನ್ ಶಿಬಿರದಲ್ಲಿ ಬಂಧನಕ್ಕೀಡಾಗಿದ್ದರು. ಇವರು ಸುಮಾರು 20 ಕ್ಕೂ ಹೆಚ್ಚು ವರ್ಷಗಳ ಕಾಲ ಕಮ್ಯೂನಿಷ್ಟ್ ಆಡಳಿತವನ್ನು ವಿರೋಧಿಸಿದ್ದರು.

ಇವರು ಗೌಪ್ಯವಾಗಿ ಬರೆದಿದ್ದ 'ದಿ ಗುಲಾಗ್ ಆರ್ಚಿಪೆಲಗೊ' ಸ್ಟಾಲಿನ್ ಶಿಬಿರಗಳ ಕ್ರೌರ್ಯವನ್ನು ಸಾರಿದೆ. 1973ರಿಂದ 1978ರ ತನಕ ಮೂರು ಸಂಪುಟಗಳಲ್ಲಿ ರಚಿತವಾದ ಕೃತಿ ಪ್ಯಾರಿಸ್‌ನಲ್ಲಿ ಬಿಡುಗಡೆಯಾಗಿತ್ತು.

'ದಿ ಫಸ್ಟ್ ಸರ್ಕಲ್' ಮತ್ತು 'ಕ್ಯಾನ್ಸರ್ ವಾರ್ಡ್' ಕೃತಿಗಳು ಅವರಿಗೆ ಜಾಗತಿಕ ಮನ್ನಣೆ ಹಾಗೂ ನೋಬೆಲ್ ಪ್ರಶಸ್ತಿ ತಂದುಕೊಟ್ಟಿವೆ.
ಮತ್ತಷ್ಟು
ಐಎಸ್ಐ ಪಾಕಿಸ್ತಾನದ ಪ್ರಥಮ ಭದ್ರತೆ: ಮುಷ್
ಚೀನ: ಉಗ್ರರ ದಾಳಿಗೆ 16 ಪೊಲೀಸರು ಬಲಿ
ಇರಾನ್ ದಿಗ್ಬಂಧನ ಹೆಚ್ಚಳಕ್ಕೆ ಅಮೆರಿಕ ಒತ್ತಾಯ
ಎಲ್‌ಟಿಟಿಇ ಕಾರ್ಯಕರ್ತನ ಬಂಧನ
ಕಾರ್ ಬಾಂಬ್‌ ಸ್ಪೋಟ: 8 ಬಲಿ
ಮೊಗಾದೀಶು ಬಾಂಬ್ ಸ್ಪೋಟ: 20 ಮಹಿಳೆಯರ ಸಾವು