ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮ ಹುಟ್ಟುಹಬ್ಬದಲ್ಲಿ ಘನತೆವೆತ್ತ ಅತಿಥಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮ ಹುಟ್ಟುಹಬ್ಬದಲ್ಲಿ ಘನತೆವೆತ್ತ ಅತಿಥಿಗಳು Search similar articles
ND
ಅಮೆರಿಕ ಅಧ್ಯಕ್ಷ ಪದಾಕಾಂಕ್ಷಿ, ಡೆಮಾಕ್ರಿಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮ ಸೋಮವಾರ 47ರ ಹರೆಯಕ್ಕೆ ಕಾಲಿರಿಸಿದ್ದು, ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ನೂರಾರು ಸ್ನೇಹಿತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

"ಹುಟ್ಟು ಹಬ್ಬಕ್ಕೆ ನಿಮಗೇನು ಉಡುಗೋರೆ ಬೇಕೆಂದು ಒಬಾಮರನ್ನು ಕೇಳಿದಾಗ, ಅವರು ಇಂಡಿಯಾನ, ಕೊಲೊರಡೋ ಮತ್ತು ವರ್ಜೀನಿಯಾಗಳು ಬೇಕೆಂದರು" ಎಂಬುದಾಗಿ ಒಬಾಮರನ್ನು ಪರಿಚಯಿಸಿದ ಮೆಸಾಚುಸೆಟ್ಸ್ ಸೆನೆಟರ್ ಜಾನ್ ಕೆರ್ರಿ ನುಡಿದರು. ಇವು ಮೂರು ರಾಜ್ಯಗಳು ನವೆಂಬರ್ 4ರಂದು ನಡೆಯುವ ಚುನಾವಣೆಯಲ್ಲಿ ಒಬಾಮ ಅಧಿಕ ವಿಶ್ವಾಸ ಇಟ್ಟಿರುವ ರಾಜ್ಯಗಳಾಗಿವೆ.

ಹುಟ್ಟುಹಬ್ಬ ನಿಧಿ ಸಂಗ್ರಹಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು 850 ಮಂದಿ ಪಾಲ್ಗೊಂಡಿದ್ದರು. ಟಿಕೆಟ್ ಒಂದರ 1000 ಡಾಲರ್, 4,600 ಡಾಲರ್ ನಿಗದಿ ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ 250 ಮಂದಿ ಒಬಾಮರೊಂದಿಗೆ ಭೋಜನ ಸೇವಿಸಿದ್ದರು. ಇದಕ್ಕಾಗಿ ಅವರು 15000 ಡಾಲರ್ ನೀಡಿ ಟಿಕೆಟ್ ಖರೀದಿಸಿದ್ದರು. ಜೋಡಿಯೊಂದು ಈ ಕೂಟದಲ್ಲಿ ಪಾಲ್ಗೊಳ್ಳಲು 28,500 ಡಾಲರ್ ಮೊತ್ತದ ಟಿಕೇಟ್ ಖರೀದಿಸಬೇಕಿತ್ತು.

ಈ ವೇಳೆ ಒಬಾಮ ಅವರ ಗೆಲುವಿಗೆ ಭರಪೂರ ಹಾರೈಕೆಗಳು ಹರಿದು ಬಂದಿದ್ದು, ಹುಟ್ಟು ಹಬ್ಬದ ಹಾರೈಕೆ ನಿಜವಾಗಲು ಒಬಾಮ ಇನ್ನು ಕೆಲವು ತಿಂಗಳು ಕಾಯಬೇಕಾಗಿದೆ.
ಮತ್ತಷ್ಟು
ಬಾಂಗ್ಲಾ: ಅವಾಮಿ ಲೀಗ್‌ಗೆ ಪ್ರಚಂಡ ಜಯ
ನೋಬೆಲ್ ಪ್ರಶಸ್ತಿ ವಿಜೇತ ರಶ್ಯಾ ಸಾಹಿತಿ ನಿಧನ
ಐಎಸ್ಐ ಪಾಕಿಸ್ತಾನದ ಪ್ರಥಮ ಭದ್ರತೆ: ಮುಷ್
ಚೀನ: ಉಗ್ರರ ದಾಳಿಗೆ 16 ಪೊಲೀಸರು ಬಲಿ
ಇರಾನ್ ದಿಗ್ಬಂಧನ ಹೆಚ್ಚಳಕ್ಕೆ ಅಮೆರಿಕ ಒತ್ತಾಯ
ಎಲ್‌ಟಿಟಿಇ ಕಾರ್ಯಕರ್ತನ ಬಂಧನ