ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೆ.8ಕ್ಕೆ ಅಣು ಒಪ್ಪಂದ ಅಮೆರಿಕ ಕಾಂಗ್ರೆಸ್‌ನಲ್ಲಿ ಮಂಡನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆ.8ಕ್ಕೆ ಅಣು ಒಪ್ಪಂದ ಅಮೆರಿಕ ಕಾಂಗ್ರೆಸ್‌ನಲ್ಲಿ ಮಂಡನೆ Search similar articles
PTI
ಭಾರತ-ಅಮೆರಿಕ ಅಣು ಒಪ್ಪಂದವನ್ನು ಅಂಗೀಕಾರಕ್ಕಾಗಿ ಅಮೆರಿಕ ಕಾಂಗ್ರೆಸ್ ಮುಂದೆ ಸೆಪ್ಟೆಂಬರ್ 8ರಂದು ಮಂಡಿಸುವ ನಿರೀಕ್ಷೆ ಹೊಂದಿರುವ ಬುಶ್ ಆಡಳಿತವು, ಈ ತಿಂಗಳ ಅಂತ್ಯದಲ್ಲಿ ಎನ್ಎಸ್‌ಜಿಯಿಂದ ಒಪ್ಪಿಗೆ ಪಡೆಯುವ ಆಶಾಭಾವನೆ ಹೊಂದಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

"ನಾವಿದನ್ನು ಸೆಪ್ಟೆಂಬರ್ 8ರಂದು ಕಾಂಗ್ರೆಸ್‌ನಲ್ಲಿ ಯಶಸ್ವಿಯಾಗಿ ಪ್ರತಿನಿಧಿಸಬಲ್ಲೆವು" ಎಂಬುದಾಗಿ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಗೊಂನ್ಸಾಲೋ ಗೊಂನ್ಸೇಲ್ಸ್ ಹೇಳಿದ್ದಾರೆ.

ಆಗಸ್ಟ್ 21ರಂದು ವಿಯೆನ್ನಾದಲ್ಲಿ ಸಭೆ ಸೇರಲಿರುವ 45 ರಾಷ್ಟ್ರಗಳ ಸದಸ್ಯತ್ವದ ಅಣು ಪೂರೈಕೆ ಸಮೂಹ(ಎನ್ಎಸ್‌ಜಿ) ದೊಂದಿಗೆ ಭಾರತ-ಅಮೆರಿಕ ಅಣು ಉಪಕ್ರಮಗಳ ಕುರಿತು ಚರ್ಚಿಸಲು ಭಾರತ ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಒಪ್ಪಂದವು ದ್ವಿಪಕ್ಷೀಯ ಸಂಬಂಧಗಳು ಮಾತ್ರವಲ್ಲದೆ, ವಿಶ್ವದ ಉಳಿದ ಭಾಗಗಳ ಪರಮಾಣು ಭದ್ರತೆಗೂ ಪ್ರಾಮುಖ್ಯವಾಗಿರುವ ಕಾರಣ ನಾವು ಈ ಒಪ್ಪಂದವನ್ನು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ.

ಆದರೆ, ಇದೀಗ ಐಎಇಎ ಈ ವಿಚಾರವನ್ನು ಮತಕ್ಕೆ ಹಾಕಿದ್ದು, ಈ ವಿಚಾರವನ್ನು ನಾವು ಎನ್ಎಸ್‌ಜಿ ಸಮೂಹದೊಂದಿಗೆ ಚರ್ಚಿಸುವ ಕುರಿತು ಎದುರು ನೋಡುತ್ತಿರುವುದಾಗಿ ಹೇಳಿರುವ ಅವರು, ಈ ಕುರಿತು ಧನಾತ್ಮಕ ಫಲಿತಾಂಶವನ್ನು ನಿರೀಕ್ಷಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಅಮೆರಿಕ ಕಾಂಗ್ರೆಸ್ ಅಧಿವೇಶನ ಸೆಪ್ಟಂಬರ್ 8ರಿಂದ 26ರ ತನಕ ನಡೆಯಲಿದೆ.
ಮತ್ತಷ್ಟು
ಒಬಾಮ ಹುಟ್ಟುಹಬ್ಬದಲ್ಲಿ ಘನತೆವೆತ್ತ ಅತಿಥಿಗಳು
ಬಾಂಗ್ಲಾ: ಅವಾಮಿ ಲೀಗ್‌ಗೆ ಪ್ರಚಂಡ ಜಯ
ನೋಬೆಲ್ ಪ್ರಶಸ್ತಿ ವಿಜೇತ ರಶ್ಯಾ ಸಾಹಿತಿ ನಿಧನ
ಐಎಸ್ಐ ಪಾಕಿಸ್ತಾನದ ಪ್ರಥಮ ಭದ್ರತೆ: ಮುಷ್
ಚೀನ: ಉಗ್ರರ ದಾಳಿಗೆ 16 ಪೊಲೀಸರು ಬಲಿ
ಇರಾನ್ ದಿಗ್ಬಂಧನ ಹೆಚ್ಚಳಕ್ಕೆ ಅಮೆರಿಕ ಒತ್ತಾಯ