ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹಣದುಬ್ಬರದಿಂದ ಲೈಂಗಿಕ ದಂಧೆಗೆ ಪ್ರೇರೇಪಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರದಿಂದ ಲೈಂಗಿಕ ದಂಧೆಗೆ ಪ್ರೇರೇಪಣೆ Search similar articles
ಮೆಕ್ಸಿಕೋ ನಗರ: ವಿಶ್ವಾದ್ಯಂತ ಆಹಾರ ವಸ್ತುಗಳ ಬೆಲೆ ಏರಿಕೆಯು, ಅಗತ್ಯ ವಸ್ತುಗಳ ಖರೀದಿಗೆ ಹಣಸಂಪಾದನೆಗಾಗಿ ಬಡ ಮಹಿಳೆಯರನ್ನು ಲೈಂಗಿಕ ವ್ಯಾಪಾರಕ್ಕಿಳಿಯಲು ಪ್ರೇರೇಪಿಸಬಹುದು ಎಂದು ಹೇಳಿರುವ ವಿಶ್ವಸಂಸ್ಥೆಯು, ಇದು ಏಡ್ಸ್ ಸೋಂಕನ್ನು ಮತ್ತಷ್ಟು ಹರಡುವ ಅಪಾಯವನ್ನು ಹೊಂದಿದೆ ಎಂಬ ಎಚ್ಚರಿಕೆ ನೀಡಿದೆ.

ಮೆಕ್ಸೆಕೋ ಸಿಟಿಯಲ್ಲಿ ನಡೆದ ಏಡ್ಸ್ ಸಮ್ಮೇಳದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು, ಪೆಸಿಫಿಕ್‌ನ ಮೀನುಗಾರ ಮಹಿಳೆಯರು ಮತ್ತು ಕೀನ್ಯಾದ ಮಹಿಳೆಯರು ಆಹಾರ ಸಂಪಾದನೆಗಾಗಿ ಮೈಮಾರಾಟಕ್ಕಿಳಿಯುವ ಒತ್ತಡಕ್ಕೆ ಸಿಲುಕಿದ್ದಾರೆ ಎಂಬ ಭಯಾನಕ ಅಂಶವನ್ನು ಪ್ರಸ್ತುತ ಪಡಿಸಿದ್ದಾರೆ. ಅಲ್ಲದೆ, ಇದು ಈ ಮಾರಣಾಂತಿಕ ರೋಗದ ಹರಡುವಿಕೆಯಲ್ಲಿ ಹೊಸ ತಿರುವು ಪಡೆಯಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.

ಬದುಕಿಗೆ ಆಹಾರವು ಅತ್ಯಂತ ಮೂಲಭೂತ ಅವಶ್ಯಕತೆಯಾಗಿರುವ ಕಾರಣ ಜನತೆ ಯಾವ ವಿಧಾನಕ್ಕಾದರೂ ಇಳಿಯುತ್ತಾರೆ ಎಂಬುದಾಗಿ ದಕ್ಷಿಣ ಆಫ್ರಿಕಾದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಫಡ್ಝಾಯ್ ಮುಕೋನೊವೆಶುರೊ ಹೇಳಿದ್ದಾರೆ.

ಜೈವಿಕ ಇಂಧನಗಳ ಬಳಕೆ, ಏಷ್ಯಾದಲ್ಲಿ ಹೆಚ್ಚುತ್ತಿರುವ ಆಹಾರ ಧಾನ್ಯಗಳ ಬೇಡಿಕೆ, ಕ್ಷಾಮ ಹಾಗೂ ಮಾರುಕಟ್ಟೆಗಳ ಸಟ್ಟಾ ವ್ಯವಹಾರಗಳಿಂದಾಗಿ ಆಹಾರವಸ್ತುಗಳ ಬೆಲೆ ಏರಿಕೆಯು ಕಳೆದ ವರ್ಷ ಹೆಚ್ಚುವರಿ 500 ಲಕ್ಷ ಜನತೆಯನ್ನು ಹಸಿವಿನ ಕೂಪಕ್ಕೆ ತಳ್ಳಿತ್ತು ಎಂದು ವಿಶ್ವಸಂಸ್ಥೆ ಹೇಳಿದೆ.

ಇದು ಹಲವಾರು ಅಪಾಯಗಳಿಗೆ ಕಾರಣವಾಗಲಿದ್ದು, ಬಡಮಹಿಳೆಯರು ತಮ್ಮ ಮಕ್ಕಳ ಹೊಟ್ಟೆ ತುಂಬಿಸುವ ಸಲುವಾಗಿ ಲೈಂಗಿಕ ದಂಧೆಗಿಳಿಯುವುದು ಅವುಗಳಲ್ಲಿ ಒಂದಾಗಿದೆ ಎಂದು ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಸ್ಟುವರ್ಟ್ ಗಿಲ್ಲೇಸ್ಪಿ ಹೇಳಿದ್ದಾರೆ.

ಬೋಟ್ಸ್‌ವಾನ, ಸ್ವಾಝಿಲ್ಯಾಂಡ್, ಮಾಲವಿ, ಜಾಂಬಿಯಾ ಮತ್ತು ತಾಂಜೇನಿಯಾದಲ್ಲಿ ನಡೆಸಿರುವ ಇತ್ತೀಚಿನ ಅಧ್ಯಯನಗಳು, ಆಹಾರ ಕೊರತೆ ಮತ್ತು ಬಡ ಮಹಿಳೆಯರಲ್ಲಿ ಅಸುರಕ್ಷಿತ ಲೈಂಗಿಕ ವ್ಯಾಪಾರದ ಸಂಬಂಧವನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ.

ಕೀನ್ಯದ ವಿಕ್ಟೋರಿಯಾ ಸರೋವರದ ತಟಗಳಲ್ಲಿ ಸೆಕ್ಸ್‌ಗಾಗಿ ಮೀನು ದಂಧೆಯು ಸಾಮಾನ್ಯವೆಂಬಂತಾಗಿದೆ ಎಂದು ಸಮ್ಮೇಳನದಲ್ಲಿ ಭಾಗವಹಿಸಿರುವ ಪ್ರತಿನಿಧಿಗಳು ಹೇಳಿದ್ದಾರೆ. ಇಲ್ಲಿನ ಮೀನುಗಾರ ಮಹಿಳೆಯರು ಮೀನು ಮಾರಾಟ ಮಾಡುವ ಗಂಡಸರೊಂದಿಗಿನ ಲೈಂಗಿಕ ಒಪ್ಪಂದದ ಮೂಲಕ ತಮ್ಮ ವ್ಯಾಪಾರಕ್ಕೆ ಮೀನುಗಳನ್ನು ಪಡೆಯುತ್ತಾರೆ ಎಂಬ ಅಂಶವು ಸಮ್ಮೇಳನದಲ್ಲಿ ವ್ಯಕ್ತವಾಗಿದೆ.

ಇದಲ್ಲದೆ, ಅಪೌಷ್ಠಿಕತೆಯು ಇದೀಗಾಗಲೇ ಏಡ್ಸ್ ಸೋಂಕು ಹೊಂದಿರುವವರಲ್ಲಿ ಅಪಾಯವನ್ನು ಹೆಚ್ಚಿಸಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಖಾಲಿ ಹೊಟ್ಟೆಯಲ್ಲಿ ಎಚ್ಐವಿ ಔಷಧಿಗಳನ್ನು ಸೇವಿಸುವುದೂ ಸಹ ಇತರ ಅಪಾಯಗಳಿಗೆ ಕಾರಣವಾಗಬಹುದು. ಹೆಚ್ಚಿನವರು ಇದೀಗಾಗಲೇ ಕ್ಷಯರೋಗಕ್ಕೆ ತುತ್ತಾಗಿದ್ದು, ಇವರಿಗೆ ಹೆಚ್ಚಿನ ಪೋಷಕಾಂಶಗಳು ಮತ್ತು ಕ್ಯಾಲೋರಿಗಳ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಜಗತ್ತಿನಲ್ಲಿ ಪ್ರತಿವರ್ಷ 330 ಲಕ್ಷ ಮಂದಿ ಎಚ್ಐವಿ ಸೋಂಕಿಗೆ ತುತ್ತಾಗುತ್ತಿದ್ದು, ಇವರಲ್ಲಿ ಅರ್ಧದಷ್ಟು ಮಂದಿ ಮಹಿಳೆಯರು. ಸೋಂಕು ಪೀಡಿತರಲ್ಲಿ 20 ಲಕ್ಷಮಂದಿ ಪ್ರತಿವರ್ಷ ಸಾವಿಗೀಡಾಗುತ್ತಾರೆ ಎಂದು ಸಮ್ಮೇಳನದಲ್ಲಿ ಹೇಳಲಾಗಿದೆ.
ಮತ್ತಷ್ಟು
ಸೆ.8ಕ್ಕೆ ಅಣು ಒಪ್ಪಂದ ಅಮೆರಿಕ ಕಾಂಗ್ರೆಸ್‌ನಲ್ಲಿ ಮಂಡನೆ
ಒಬಾಮ ಹುಟ್ಟುಹಬ್ಬದಲ್ಲಿ ಘನತೆವೆತ್ತ ಅತಿಥಿಗಳು
ಬಾಂಗ್ಲಾ: ಅವಾಮಿ ಲೀಗ್‌ಗೆ ಪ್ರಚಂಡ ಜಯ
ನೋಬೆಲ್ ಪ್ರಶಸ್ತಿ ವಿಜೇತ ರಶ್ಯಾ ಸಾಹಿತಿ ನಿಧನ
ಐಎಸ್ಐ ಪಾಕಿಸ್ತಾನದ ಪ್ರಥಮ ಭದ್ರತೆ: ಮುಷ್
ಚೀನ: ಉಗ್ರರ ದಾಳಿಗೆ 16 ಪೊಲೀಸರು ಬಲಿ