ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಚೀನ: ಮತ್ತೆ ಕಂಪಿಸಿದ ಭೂಮಿ, 1 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನ: ಮತ್ತೆ ಕಂಪಿಸಿದ ಭೂಮಿ, 1 ಬಲಿ Search similar articles
ಭೂಕಂಪ ಪೀಡಿತ ಚೀನದ ನೈರುತ್ಯ ಭಾಗದಲ್ಲಿರುವ ಸಿಚುವಾನ್ ಪ್ರಾಂತ್ಯದಲ್ಲಿ ಮಂಗಳವಾರ ಪ್ರಬಲ ಕಂಪನ ಸಂಭವಿಸಿದ್ದು, ಪರಿಣಾಮ ಓರ್ವವ್ಯಕ್ತಿ ಮೃತನಾಗಿದ್ದು ಇತರ 23 ಮಂದಿ ಗಾಯಗೊಂಡಿದ್ದಾರೆ.

ಸುಮಾರು 70 ಸಾವಿರ ಮಂದಿಯನ್ನು ಆಹುತಿ ಪಡೆದಿರುವ ಮೇ 12ರ ಭೂಕಂಪದ ವೇಳೆಗೆ ಅತೀವ ಹಾನಿಗೊಂಡಿದ್ದ, ಯಾವೊಡು ಪಟ್ಟಣದಲ್ಲಿ 6.1 ತೀವ್ರತೆಯ ಕಂಪನ ಉಂಟಾಗಿದ್ದು, ಇಲ್ಲಿಗೆ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ ಎಂದು ಪ್ರಚಾರ ಇಲಾಖೆಯ ಮುಖ್ಯಸ್ಥ ಮಾ ಜೈನ್ ಹೇಳಿದ್ದಾರೆ.

ಕಂಪನದಿಂದ ಭಯಭೀತಗೊಂಡಿರುವ ಹಲವಾರು ಮಂದಿ ತಮ್ಮ ಮನೆಗಳಿಂದ ಹೊರಗೋಡಿ ಬಂದರು. ಹಾಂಗ್ಶಾಂಗ್ ಹಾಗೂ ಕ್ಸಿಯಾನ್ ಪಟ್ಟಣಗಳಲ್ಲಿ ಭೂಮಿ ಕಂಪಿಸಿದ್ದು, ಪಶ್ಚಾತ್ ಕಂಪನಗಳು ಸಂಭವಿಸಿವೆ. ಮೇ 12ರ ಭಾರೀ ಭೂಕಂಪದ ಬಳಿಕ ಸುಮಾರು 22,019 ಪಶ್ಚಾತ್ ಕಂಪನಗಳು ಸಂಭವಿಸಿವೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಝ್ಸಿನುವಾ ವರದಿ ಮಾಡಿದೆ.
ಮತ್ತಷ್ಟು
ಭಾರತಕ್ಕೆ ಹರಕೆಯಕುರಿ ಬೇಕಾಗಿದೆ: ಬಾಂಗ್ಲಾ
ಹಣದುಬ್ಬರದಿಂದ ಲೈಂಗಿಕ ದಂಧೆಗೆ ಪ್ರೇರೇಪಣೆ
ಸೆ.8ಕ್ಕೆ ಅಣು ಒಪ್ಪಂದ ಅಮೆರಿಕ ಕಾಂಗ್ರೆಸ್‌ನಲ್ಲಿ ಮಂಡನೆ
ಒಬಾಮ ಹುಟ್ಟುಹಬ್ಬದಲ್ಲಿ ಘನತೆವೆತ್ತ ಅತಿಥಿಗಳು
ಬಾಂಗ್ಲಾ: ಅವಾಮಿ ಲೀಗ್‌ಗೆ ಪ್ರಚಂಡ ಜಯ
ನೋಬೆಲ್ ಪ್ರಶಸ್ತಿ ವಿಜೇತ ರಶ್ಯಾ ಸಾಹಿತಿ ನಿಧನ