ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್‌ನಾದ್ಯಂತ ತಾಲಿಬಾನ್ ದಾಳಿ ಬೆದರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ನಾದ್ಯಂತ ತಾಲಿಬಾನ್ ದಾಳಿ ಬೆದರಿಕೆ
ಸ್ವಾತ್ ಮತ್ತು ಇತರ ಬುಡಕಟ್ಟು ಪ್ರದೇಶಗಳಲ್ಲಿ ತಕ್ಷಣವೇ ಸೇನಾಕಾರ್ಯಾಚರಣೆಯನ್ನು ಸ್ಥಗಿತಗೊಳಿಸದಿದ್ದಲ್ಲಿ ವಾಣಿಜ್ಯ ಕೇಂದ್ರ ಕರಾಚಿ ಸೇರಿದಂತೆ ರಾಷ್ಟ್ರಾದ್ಯಂತ ಆತ್ಮಾಹುತಿ ದಾಳಿ ನಡೆಸುವುದಾಗಿ ಪಾಕಿಸ್ತಾನಿ ತಾಲಿಬಾನ್ ಎಚ್ಚರಿಕೆ ನೀಡಿದೆ.

ನ್ಯಾಟೋ ಮತ್ತು ಅಫ್ಘಾನ್ ಸೇನೆಯು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ನುಸುಳುವುದನ್ನು ತಡೆಯಲು ಆಧುನಿಕ ವಿಮಾನ ವಿರೋಧಿ ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಅಫ್ಘಾನ್ ಗಡಿಯುದ್ದಕ್ಕೂ ಸ್ಥಾಪಿಸಲಾಗಿದೆ ಎಂದು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನದ ವಕ್ತಾರ ಮೌಲವಿ ಒಮರ್ ಹೇಳಿದ್ದಾರೆ.

ಸರಕಾರದ ಶಾಂತಿ ಪ್ರಸ್ತಾವನೆಗೆ ತಾಲಿಬಾನ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ, ಆದರೆ, ಒಕ್ಕೂಟ ಮತ್ತು ಎನ್‌ಡಬ್ಲ್ಯೂಎಫ್‌ಪಿ ಸರಕಾರಗಳು ತಮ್ಮ ಬದ್ಧತೆಯನ್ನು ಪಾಲಿಸುವಲ್ಲಿ ವಿಫಲವಾಗಿವೆ ಎಂದೂ ಒಮರ್ ದೂರಿದ್ದಾರೆ.

ಸರಕಾರವು ಅಧ್ಯಕ್ಷ ಮುಷರಫ್ ಅವರ ನೀತಿಗಳನ್ನು ಮುಂದುವರಿಸುತ್ತಿದೆ ಮತ್ತು ಅಮೆರಿಕದ ಕೊನೆಗಾಣದ ಕಾರ್ಯಸೂಚಿಯನ್ನು ಪೂರ್ಣಗೊಳ್ಳಲು ಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಛೀಮಾರಿ ಭೀತಿ: ಮುಷರಫ್ ಚೀನ ಭೇಟಿ ರದ್ದು
ಜಪಾನ್: ಹಿರೋಶಿಮಾ ದಾಳಿ ಕರಾಳ ದಿನಾಚರಣೆ
ಚೀನ: ಮತ್ತೆ ಕಂಪಿಸಿದ ಭೂಮಿ, 1 ಬಲಿ
ಭಾರತಕ್ಕೆ ಹರಕೆಯಕುರಿ ಬೇಕಾಗಿದೆ: ಬಾಂಗ್ಲಾ
ಹಣದುಬ್ಬರದಿಂದ ಲೈಂಗಿಕ ದಂಧೆಗೆ ಪ್ರೇರೇಪಣೆ
ಸೆ.8ಕ್ಕೆ ಅಣು ಒಪ್ಪಂದ ಅಮೆರಿಕ ಕಾಂಗ್ರೆಸ್‌ನಲ್ಲಿ ಮಂಡನೆ