ಮಾಸ್ಕೋ ವಿರುದ್ಧ ತನ್ನ ಜನರನ್ನು ಎತ್ತಿಕಟ್ಟಲು ಜಪಾನ್ ಕುರಿಲ್ ದ್ವೀಪ ವಿವಾದವನ್ನು ಬಳಸಿಕೊಳ್ಳುತ್ತಿದೆ ಎಂದು ರಶ್ಯಾದ ಕಿರಿಯ ವಿದೇಶಾಂಗ ಸಚಿವ ಅಲೆಕ್ಸಿ ಬೊರೊಡ್ವಕಿನ್ ಬುಧವಾರ ಪ್ರಕಟವಾಗಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಸಾರ್ವಜನಿಕ ಅಭಿಪ್ರಾಯವನ್ನು ತಿರುಗಿಸುವ ಜಪಾನಿನ ಪ್ರಯತ್ನಗಳನ್ನು ನಿಲ್ಲಿಸಲು ನಾವು ಬಯಸುತ್ತೇವೆ, ಉತ್ತರದ ಉಗ್ರರೆಂದು ಕರೆಸಿಕೊಂಡವರ ಸಮಸ್ಯೆಯನ್ನುಇದೊಂದು ರಷ್ಯಾ ವಿರುದ್ಧದ ಸ್ನೇಹಿಯಲ್ಲದ, ಮತ್ತು ಕೃತಕ ದಾರಿಯಾಗಿದೆ ಎಂದು ಅವರು ರಶ್ಯಾ ದೈನಿಕ ವ್ರೆಮ್ಯಾ ನೊವೊಸ್ತಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಜಪಾನ್ ಕುರಿತು ತನ್ನ ಪ್ರಜೆಗಳಲ್ಲಿ ಧನಾತ್ಮಕ ಅಭಿಪ್ರಾಯ ಮೂಡಿಸಲು ರಶ್ಯಾ ಸಾಕಷ್ಟು ಕಾರ್ಯವೆಸಗುತ್ತಿದೆ ಎಂದಿರುವ ಬೊರೊಡ್ವಕಿನ್, ಉಭಯ ರಾಷ್ಟ್ರಗಳ ನಡುವೆ, ಸ್ನೇಹ, ವಿಶ್ವಾಸ ಮತ್ತು ಭಾಗೀದಾರಿಕೆಯನ್ನು ಹೆಚ್ಚಿಸುವುದು ದ್ವೀಪಗಳ ಕುರಿತ ವಿವಾದವನ್ನು ಪರಿಹರಿಸಲು ಸಹಕರಿಸಲಿದೆ ಎಂದು ಅವರು ಹೇಳಿದ್ದಾರೆ.
|