ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಒಪ್ಪಂದ ಮುಂದೂಡಿಕೆಗೆ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಒಪ್ಪಂದ ಮುಂದೂಡಿಕೆಗೆ ಒತ್ತಾಯ
ವಾಶಿಂಗ್ಟನ್: ಮತ್ತೊಮ್ಮೆ ಅಣ್ವಸ್ತ್ರ ಪರೀಕ್ಷೆ ನಡೆಸಿದಲ್ಲಿ ವ್ಯಾಪಾರವನ್ನು ಸ್ಥಗಿತಗೊಳಿಸುವ ಅಮೆರಿಕ ಕಾನೂನಿನ ಅನುವರ್ತನೆ ಕುರಿತಂತೆ ಗ್ಯಾರಂಟಿ ನೀಡದ ಹೊರತು ಭಾರತದೊಂದಿಗಿನ ಅಣು ಒಪ್ಪಂದದಲ್ಲಿ ಮುಂದುವರಿಯಬಾರದು ಎಂಬುದಾಗಿ ಅಮೆರಿಕ ಪ್ರತಿನಿಧಿ ಸಭೆಯ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರು ಬುಶ್ ಆಡಳಿತವನ್ನು ಒತ್ತಾಯಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ಅವರಿಗೆ ಬರೆದಿರುವ ಪತ್ರದಲ್ಲಿ ಕ್ಯಾಲಿಫೋರ್ನಿಯಾ ಪ್ರತಿನಿಧಿಯಾಗಿರುವ ಡೆಮಾಕ್ರೆಟ್ ಸದಸ್ಯ ಹೋವರ್ಡ್ ಬರ್ಮನ್, ಅಣು ಒಪ್ಪಂದವನ್ನು ಸದ್ಯಕ್ಕೆ ಸ್ಥಗಿತಗೊಳಿಸುವುದು ಸೂಕ್ತ ಎಂದು ಹೇಳಿದ್ದಾರೆ. ಅಲ್ಲದೆ ಈ ವಿಚಾರವನ್ನು ಮುಂದಿನ ಕಾಂಗ್ರೆಸ್ ತನಕ ಮುಂದೂಡಬೇಕು ಎಂದೂ ಹೇಳಿದ್ದಾರೆ.

ಮುಂಬರುವ ಜನವರಿಯಲ್ಲಿ ಮುಂದಿನ ಕಾಂಗ್ರೆಸ್ ಅಧಿವೇಶನ ನಡೆಯಲಿದ್ದು, ಆ ವೇಳೆ ಇಂತಹ ಸಂಕೀರ್ಣ ವಿಚಾರಗಳನ್ನು ವಿಮರ್ಷಿಸುವುದು ಒಳಿತು ಎಂದು ಅವರು ಪತ್ರದಲ್ಲಿ ಅಭಿಪ್ರಾಯಿಸಿದ್ದಾರೆ.

ಮುಂದಿನ ಜನವರಿಯಲ್ಲಿ ಕಾಂಗ್ರೆಸ್ ತೊರೆಯುವ ಮುನ್ನ ಈ ಒಪ್ಪಂದಕ್ಕೆ ಅಂಗೀಕಾರ ಪಡೆಯಲು ಬುಶ್ ಆಡಳಿತ ಬಯಸಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಲು ವಿದೇಶಾಂಗ ವಕ್ತಾರರು ನಿರಾಕರಿಸಿದ್ದಾರೆ. ಈ ಪ್ರಸ್ತಾಪಿತ ಒಪ್ಪಂದದ ಪ್ರಕಾರ ಭಾರತ ಅಮೆರಿಕದಿಂದ ಅಣುಇಂಧನ ಹಾಗೂ ಸಲಕರಣೆಗಳನ್ನು ಪಡೆಯಬಹುದಾಗಿದೆ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿಹಾಕದ ಭಾರತವು, 1974ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಬಳಿಕ ಅಣುವ್ಯವಹಾರಕ್ಕೆ ಸಂಬಂಧಿಸಿದಂತೆ ನಿಷೇಧ ಎದುರಿಸುತ್ತಿದೆ. ಈ ಒಪ್ಪಂದವು ಜಾರಿಯಾದಲ್ಲಿ ಈ ನಿಷೇಧವನ್ನು ತೊಡೆದು ಹಾಕಲಾಗುವುದು.
ಮತ್ತಷ್ಟು
ಭಯೋತ್ಪಾದನೆ: ಲಾಡೆನ್ ಮಾಜಿ ಚಾಲಕ ದೋಷಿ
ಐಎಸ್ಐ ಮೇಲಿನ ನಿಯಂತ್ರಣ ಆದೇಶ ವಾಪಸ್
ಕುರಿಲ್ ದ್ವೀಪ: ಜಪಾನ್‌ಗೆ ರಶ್ಯಾ ಟೀಕೆ
ಪಾಕ್‌ನಾದ್ಯಂತ ತಾಲಿಬಾನ್ ದಾಳಿ ಬೆದರಿಕೆ
ಛೀಮಾರಿ ಭೀತಿ: ಮುಷರಫ್ ಚೀನ ಭೇಟಿ ರದ್ದು
ಜಪಾನ್: ಹಿರೋಶಿಮಾ ದಾಳಿ ಕರಾಳ ದಿನಾಚರಣೆ