ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಚೀನ ಮಾನವ ಹಕ್ಕು ಕುರಿತು ಬುಶ್ ಕಳವಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನ ಮಾನವ ಹಕ್ಕು ಕುರಿತು ಬುಶ್ ಕಳವಳ
ND
ಚೀನ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಿದ್ಧವಾಗಿರುವ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್, ಚೀನದ ಭಿನ್ನಮತೀಯರ ಬಂಧನ ಹಾಗೂ ಮಾನವ ಹಕ್ಕುಗಳ ಕುರಿತು 'ಅತೀವ ಕಳವಳ' ವ್ಯಕ್ತಪಡಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತನ್ನ ಈ ಹೇಳಿಕೆಯು ಒಲಿಂಪಿಕ್ಸ್ ಸಂದರ್ಭದಲ್ಲಿ ಚೀನವನ್ನು ಹೀಗಳೆಯುವುದಕ್ಕಲ್ಲ ಎಂದು ಒತ್ತಿ ಹೇಳುತ್ತಾ, ವಿಶ್ವದ ಅತಿಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರದ ಕುರಿತು ಭವಿಷ್ಯದಲ್ಲಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ಆದರೆ ಅವರು ಚೀನಾದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಕುರಿತು ವಾಶಿಂಗ್ಟನ್‌ನ ಅತೀವ ಕಳವಳದ ಕುರಿತು ಪುನರುಚ್ಚರಿಸಿದರು. ಚೀನದ ಜನತೆ, ಪ್ರತಿಯೊಬ್ಬ ಮಾನವನ ನೈಸರ್ಗಿಕ ಹಕ್ಕಾಗಿರುವ ಮೂಲಭೂತ ಸ್ವಾತಂತ್ರ್ಯಕ್ಕೆ ಅರ್ಹರು ಎಂಬುದಾಗಿ ಅಮೆರಿಕ ನಂಬಿದೆ ಎಂದು ನುಡಿದರವರು.

ರಾಜಕೀಯ ಭಿನ್ನಮತೀಯರು, ಮಾನವ ಹಕ್ಕುಗಳ ಪ್ರತಿಪಾದಕರು ಹಾಗೂ ಧಾರ್ಮಿಕ ಕಾರ್ಯಕರ್ತರನ್ನು ಚೀನ ಬಂಧಿಸಿರುವುದನ್ನು ಅಮೆರಿಕ ವಿರೋಧಿಸುತ್ತದೆ ಎಂದು ಅವರು ನುಡಿದರು.

ನಾವು ಮಾಧ್ಯಮ ಸ್ವಾತಂತ್ರ್ಯ, ಸಭೆಸೇರುವ ಸ್ವಾತಂತ್ರ್ಯ ಮತ್ತು ಕಾರ್ಮಿಕ ಹಕ್ಕುಗಳ ಬಗ್ಗೆ ಆಸ್ಥೆ ತೋರಿರುವುದು, ಚೀನಾ ನಾಯಕರನ್ನು ವಿರೋಧಿಸುವುದಕ್ಕಲ್ಲ, ಬದಲಿಗೆ, ಹೆಚ್ಚಿನ ಸ್ವಾತಂತ್ರ್ಯದೊಂದಿಗೆ ಜನತೆಯ ಮೇಲಿನ ವಿಶ್ವಾಸವು, ಚೀನ ತನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಅಭಿವೃದ್ಧಿ ಹೊಂದರಲು ಇರುವ ಏಕೈಕ ದಾರಿಯಾಗಿದೆ ಎಂದು ಬುಶ್ ನುಡಿದರು.

ಮುಕ್ತತೆ ಮತ್ತು ನ್ಯಾಯೋಚಿತತೆಗೆ ನಾವು ಒತ್ತಾಯಿಸುತ್ತಿರುವುದು ನಮ್ಮ ನಂಬುಗೆಗಳನ್ನು ಹೇರಲಲ್ಲ, ಬದಲಿಗೆ ಚೀನದ ಜನತೆ ಅವರ ನಂಬುಗೆಗಳನ್ನು ವ್ಯಕ್ತಪಡಿಸಲು ಎಂದು ಅವರು ನುಡಿದರು.

ಮಾನವ ಹಕ್ಕುಗಳ ಕುರಿತಂತೆ ಚೀನದ ನಡವಳಿಕೆಯ ಹಿನ್ನೆಲೆಯಲ್ಲಿ ಬುಶ್ ಒಲಿಂಪಿಕ್ಸ್ ಕ್ರೀಡಾಕೂಟನ್ನು ಬಹಿಷ್ಕರಿಸಬೇಕಿತ್ತು ಎಂಬುದಾಗಿ ಟೀಕಾಕಾರರು ಹೇಳಿದ್ದಾರೆ. ಏತನ್ಮಧ್ಯೆ, ಜಾಗತಿಕ ಕ್ರೀಡಾ ಕೂಟವನ್ನು ರಾಜಕೀಯಗೊಳಿಸಬಾರದು ಎಂದು ಚೀನ ಹೇಳಿದೆ.

ಒಲಿಂಪಿಕ್ಸ್ ಉದ್ಘಾಟನೆಯಲ್ಲಿ ಬುಶ್ ಭಾಗವಹಿಸುತ್ತಿರುವ ಎರಡು ದಿನದ ಮುಂಚಿತವಾಗಿ ಅವರ ಭಾಷಣದ ಪ್ರತಿಯನ್ನು ಬುಧವಾರದಂದು ಶ್ವೇತಭವನ ಬಿಡುಗಡೆಗೊಳಿಸಿದೆ.
ಮತ್ತಷ್ಟು
ಅಣುಒಪ್ಪಂದ ಮುಂದೂಡಿಕೆಗೆ ಒತ್ತಾಯ
ಭಯೋತ್ಪಾದನೆ: ಲಾಡೆನ್ ಮಾಜಿ ಚಾಲಕ ದೋಷಿ
ಐಎಸ್ಐ ಮೇಲಿನ ನಿಯಂತ್ರಣ ಆದೇಶ ವಾಪಸ್
ಕುರಿಲ್ ದ್ವೀಪ: ಜಪಾನ್‌ಗೆ ರಶ್ಯಾ ಟೀಕೆ
ಪಾಕ್‌ನಾದ್ಯಂತ ತಾಲಿಬಾನ್ ದಾಳಿ ಬೆದರಿಕೆ
ಛೀಮಾರಿ ಭೀತಿ: ಮುಷರಫ್ ಚೀನ ಭೇಟಿ ರದ್ದು