ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರಫ್‌‌ಗೆ ಆ.11ರಂದು ಛೀಮಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್‌‌ಗೆ ಆ.11ರಂದು ಛೀಮಾರಿ
ND
ಪಾಕಿಸ್ತಾನದ ಆಡಳಿತ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಪಿಪಿಪಿ ಮತ್ತು ಪಿಎಂಎಲ್-ಎನ್ ಅಧ್ಯಕ್ಷ ಮುಷರಫ್ ಅವರಿಗೆ ಛೀಮಾರಿ ಹಾಕಲು ಆಗಸ್ಟ್ 11ರಂದು ಮುಹೂರ್ತ ನಿಗದಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷರಿಗೆ ಛೀಮಾರಿ ಹಾಕುವ ಕರಡು ಘೋಷಣೆಯನ್ನು ಉಭಯ ಪಕ್ಷಗಳು ಅಂತಿಮಗೊಳಿಸಿವೆ ಎಂದು, ಈ ಕುರಿತು ನಡೆಸಲಾಗಿರುವ ಸಭೆಯಲ್ಲಿ ಪಾಲ್ಗೊಂಡಿರುವ ಹೆಸರು ಹೇಳಲಿಚ್ಚಿಸದ ಪಿಪಿಪಿಯ ಸಂಪುಟ ಸದಸ್ಯರೊಬ್ಬರು ಹೇಳಿದ್ದಾರೆ.

ಸಂಸತ್ತಿನ ಮೇಲ್ಮನೆಯ ನಾಯಕರಾಗಿರುವ ಪಿಪಿಪಿ ನಾಯಕ ರಾಜಾ ರಬ್ಬಾನಿ ಅವರ ಚೇಂಬರ್‌ನಲ್ಲಿ ನಡೆಸಲಾದ ಈ ಸಭೆಯಲ್ಲಿ ಈ ಘೋಷಣೆಯನ್ನು ಅಂತಿಮಗೊಳಿಸಲಾಗಿದೆ. ಅಲ್ಲದೆ ಕಳೆದ ವರ್ಷದ ತುರ್ತುಪರಿಸ್ಥಿತಿ ವೇಳೆಗೆ ಕಿತ್ತು ಹಾಕಲಾಗಿರುವ ನ್ಯಾಯಾಧೀಶರ ಮರುನೇಮಕಕ್ಕೆ ಅನುಕೂಲವಾಗುವ ರೂಪುರೇಷೆಗಳನ್ನೂ ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಧ್ಯಕ್ಷರ ವಿರುದ್ಧ ಛೀಮಾರಿ ಮಸೂದೆಯನ್ನು ಸಂಸತ್ತಿನಲ್ಲಿ ಆಗಸ್ಟ್ 11ರಂದು ಮಂಡಿಸಲಾಗುವುದು ಎಂದು ಸಂಪುಟ ಸದಸ್ಯರು ಹೇಳಿದ್ದಾರೆ. ಅದೇ ದಿನದಂದು ರಾಷ್ಟ್ರೀಯ ಅಸ್ಸೆಂಬ್ಲಿ ಮತ್ತು ನಾಲ್ಕು ಪ್ರಾಂತೀಯ ಅಸ್ಲೆಂಬ್ಲಿಗಳ ವಿಶೇಷ ಅಧಿವೇಶನಗಳನ್ನೂ ಕರೆಯಲಾಗಿದೆ.

ಜಾರಿ ಆದೇಶ ಮೂಲಕ ಪದಚ್ಯುತ ನ್ಯಾಯಾಧೀಶರನ್ನು ಮರುನೇಮಕಗೊಳಿಸಲಾಗುವುದು ಎಂದು ಸಂಪುಟ ಸದಸ್ಯ ಹೇಳಿದ್ದಾರೆ. ಸಭೆಯಲ್ಲಿ ರಬ್ಬಾನಿಯವರಲ್ಲದೆ, ಪಿಎಂಎಲ್-ಎನ್ ನಾಯಕರಾದ ಇಶಾಕ್ ದಾರ್ ಮತ್ತು ಅಶನ್ ಇಕ್ಬಾಲ್, ಪಿಪಿಪಿ ನಾಯಕರು, ಒಕ್ಕೂಟದ ಮಂತ್ರಿಗಳಾದ ಶೆರ್ರಿ ರೆಹ್ಮಾನ್, ಖರ್ಷಿದ್ ಶಾ ಮತ್ತು ಫಾರೂಕ್ ನಾಯಿಕ್ ಭಾಗವಹಿಸಿದ್ದರು.

ಛೀಮಾರಿಯ ಭೀತಿಯಿಂದ ಮುಷರಫ್ ಅವರು ಬುಧವಾರ ತನ್ನ ಚೀನ ಪ್ರಯಾಣವನ್ನು ಮುಂದೂಡಿದ್ದರು. ಅವರು ಗುರುವಾರ ಸಾಯಂಕಾಲ ಬೀಜಿಂಗ್ ಒಲಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ತೆರಳಲಿದ್ದಾರೆ.
ಮತ್ತಷ್ಟು
ಚೀನ ಮಾನವ ಹಕ್ಕು ಕುರಿತು ಬುಶ್ ಕಳವಳ
ಅಣುಒಪ್ಪಂದ ಮುಂದೂಡಿಕೆಗೆ ಒತ್ತಾಯ
ಭಯೋತ್ಪಾದನೆ: ಲಾಡೆನ್ ಮಾಜಿ ಚಾಲಕ ದೋಷಿ
ಐಎಸ್ಐ ಮೇಲಿನ ನಿಯಂತ್ರಣ ಆದೇಶ ವಾಪಸ್
ಕುರಿಲ್ ದ್ವೀಪ: ಜಪಾನ್‌ಗೆ ರಶ್ಯಾ ಟೀಕೆ
ಪಾಕ್‌ನಾದ್ಯಂತ ತಾಲಿಬಾನ್ ದಾಳಿ ಬೆದರಿಕೆ