ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಲಿಂಪಿಕ್ಸ್: ವಿಶ್ವಶಾಂತಿಗೆ ಮೂನ್ ಮನವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಲಿಂಪಿಕ್ಸ್: ವಿಶ್ವಶಾಂತಿಗೆ ಮೂನ್ ಮನವಿ
ಬೀಜಿಂಗ್‌ನಲ್ಲಿ ಶುಕ್ರವಾರ ಸಾಯಂಕಾಲ ಆರಂಭಗೊಳ್ಳಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಹಿನ್ನೆಲಯಲ್ಲಿ, ಕ್ರೀಡಾಕೂಟದ ವೇಳೆ ಶಾಂತಿ ಕಾಪಾಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮಾನ್ ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

"ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ನಾನು ಸೇರುತ್ತೇನೆ. ಯುದ್ಧ ನಿರತರಾಗಿರುವವರೆಲ್ಲ ಕದನವಿರಾಮ ಘೋಷಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಅಸ್ಸೆಂಬ್ಲಿಯು ಕರೆ ನೀಡುತ್ತದೆ. ಅವರು ತಮ್ಮ ಅಸ್ತ್ರಗಳನ್ನು ಕೆಳಗಿರಿಸಲಿ. ಇದರಿಂದಾಗಿ ಮಾನವೀಯತೆಯು ಕ್ರೀಡಾಕೂಟ ಆರಂಭಕ್ಕೆ ಮುಂಚಿತವಾಗಿಯೇ ಚಿನ್ನದ ಪದಕ ಗಳಿಸುತ್ತದೆ" ಎಂದು ಬಾನ್ ಹೇಳಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟದ ಸಂದರ್ಭದಲ್ಲಿ ಸಂದೇಶ ರವಾನಿಸಿರುವ ಅವರು, ಒಲಿಂಪಿಕ್ಸ್ ಕ್ರೀಡಾಕೂಟವು ಮಾನವ ಸ್ಫೂರ್ತಿಯೊಂದಿಗೆ ಆಚರಿಸಲಾಗುತ್ತದೆ. ಇದು ವಿವಿಧ ಹಿನ್ನೆಲೆಗಳ, ಸಂಸ್ಕೃತಿಗಳ, ರಾಷ್ಟ್ರಗಳ ಕ್ರೀಡಾಪಟುಗಳನ್ನು ಉನ್ನತ ಗುರಿಯೆಡೆಗೆ ಸಾಗುವ ಸಮಾನ ಗುರಿಗಳೊಂದಿಗೆ ಒಂದೆಡೆ ಸೇರಿಸುತ್ತದೆ" ಎಂದು ಹೇಳಿದ್ದಾರೆ.

ಸಾರ್ವತ್ರಿಕ ಆಕಾಂಕ್ಷೆಯಾಗಿರುವ ಸಮಾನತೆ, ನ್ಯಾಯ, ಕ್ರೀಡಾಸ್ಪೂರ್ತಿ, ಸಹನೆ ಮತ್ತು ಇವೆಲ್ಲಕ್ಕಿಂತ ಹೆಚ್ಚಿನದ್ದಾಗಿರುವ ಶಾಂತಿಯನ್ನು ಏಕೀಕೃತಗೊಳಿಸುವುದರಲ್ಲಿ ಪಂದ್ಯದ ಉತ್ಕೃಷ್ಟತೆ ಅಡಗಿದೆ ಎಂದು ಮೂನ್ ಅಭಿಪ್ರಾಯಿಸಿದ್ದಾರೆ.

ಶಾಂತಿ ಮತ್ತು ಮಾನವೀಯತೆಯೇ ಎಲ್ಲಾ ಪದಕಗಳಿಗಿಂತಲೂ ಉನ್ನತವಾದುದು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಪರಿವಾರ ಸಮೇತ ಬೀಜಿಂಗ್‌ನಲ್ಲಿ ಸೋನಿಯಾ
ಒಲಂಪಿಕ್ಸ್ ಮೇಲೆ ದಾಳಿಯ ಬೆದರಿಕೆ
ಆಸ್ತಿ ವಾಪಾಸಾತಿಗೆ ಪ್ರಚಂಡ ತಾಕೀತು
ಮುಷರಫ್‌‌ಗೆ ಆ.11ರಂದು ಛೀಮಾರಿ
ಚೀನ ಮಾನವ ಹಕ್ಕು ಕುರಿತು ಬುಶ್ ಕಳವಳ
ಅಣುಒಪ್ಪಂದ ಮುಂದೂಡಿಕೆಗೆ ಒತ್ತಾಯ