ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವರ್ಷಾಂತ್ಯದೊಳಗೆ ಅಣುಒಪ್ಪಂದ: ಅಮೆರಿಕ ವಿಶ್ವಾಸ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಷಾಂತ್ಯದೊಳಗೆ ಅಣುಒಪ್ಪಂದ: ಅಮೆರಿಕ ವಿಶ್ವಾಸ
ಭಾರತದೊಂದಿಗಿನ ನಾಗರಿಕ ಅಣುಒಪ್ಪಂದವು ಅಮೆರಿಕದ ದೇಶೀಯ ಕಾನೂನಿನೊಂದಿಗೆ ಸುಸಂಗತವಾಗಿರಲಿದೆ ಎಂದು ಹೇಳಿರುವ ಅಮೆರಿಕ, ಈ ವರ್ಷದ ಅಂತ್ಯದಲ್ಲಿ ಈ ಕುರಿತು ಉಪಕ್ರಮಕ್ಕೆ ಕಾತರವಾಗಿದೆ.

ಅಮೆರಿಕ ಕಾಂಗ್ರೆಸ್ ಸದಸ್ಯ ಡೆಮಾಕ್ರೆಟಿಕ್ ಸದಸ್ಯ ಹೊವರ್ಡ್ ಬರ್ಮನ್ ಒಪ್ಪಂದವನ್ನು ಮುಂದೂಡಬೇಕು ಎಂದು ಮಾಡಿರುವ ಮನವಿಯ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ಉಸ್ತುವಾರಿ ವಕ್ತಾರ ಗೊನ್ಸಾಲೋ ಗಲ್ಲೆಗೋಸ್ ಅವರು, ಈ ಕುರಿತು ಯಾವುದೇ ಸಮಸ್ಯೆಗಳಿದ್ದರೂ, ಈ ವರ್ಷದ ಅಂತ್ಯದೊಳಗಾಗಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.

ಈ ಕುರಿತು ಅವಸರ ಮಾಡಿದಲ್ಲಿ ಇದು ಅಮೆರಿಕ ವ್ಯವಹಾರವನ್ನು ಕುಂಠಿತಗೊಳಿಸಬಹುದು ಎಂಬುದಾಗಿ ಬರ್ಮನ್ಎಚ್ಚರಿಸಿದ್ದು, ಅಣು ಒಪ್ಪಂದದ ಕುರಿತು ಕೂಲಂಕುಷ ಪರಿಶೀಲನೆಯ ಬಳಿಕವೇ ಮುಂದುವರಿಯಬೇಕು ಎಂದು ಹೇಳಿದ್ದಾರೆ.

ಆದರೆ, ಭಾರತದ ವಿರುದ್ಧ ಅಣು ಪೂರೈಕೆ ರಾಷ್ಟ್ರಗಳು ಹೇರಿರುವ ನಿಷೇಧವನ್ನು ಸೆಪ್ಟೆಂಬರ್ ಒಳಗಾಗಿ ಮನ್ನಾ ಮಾಡುವ ಕುರಿತು ಅಮೆರಿಕ ಕಾರ್ಯ ಕೈಗೊಂಡಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಮತ್ತಷ್ಟು
ಒಲಿಂಪಿಕ್ಸ್: ವಿಶ್ವಶಾಂತಿಗೆ ಮೂನ್ ಮನವಿ
ಪರಿವಾರ ಸಮೇತ ಬೀಜಿಂಗ್‌ನಲ್ಲಿ ಸೋನಿಯಾ
ಒಲಂಪಿಕ್ಸ್ ಮೇಲೆ ದಾಳಿಯ ಬೆದರಿಕೆ
ಆಸ್ತಿ ವಾಪಾಸಾತಿಗೆ ಪ್ರಚಂಡ ತಾಕೀತು
ಮುಷರಫ್‌‌ಗೆ ಆ.11ರಂದು ಛೀಮಾರಿ
ಚೀನ ಮಾನವ ಹಕ್ಕು ಕುರಿತು ಬುಶ್ ಕಳವಳ