ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತ ಗಡಿಯಲ್ಲಿ ಪಾಕ್ ಸೇನೆ ಹೆಚ್ಚಳ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಗಡಿಯಲ್ಲಿ ಪಾಕ್ ಸೇನೆ ಹೆಚ್ಚಳ?
ಪಾಕಿಸ್ತಾನವು ಭಾರತದ ಗಡಿಯಾದ್ಯಂತ ಒಂದು ಲಕ್ಷ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಲು ಯೋಜಿಸುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮುಂಬೈಯಲ್ಲಿ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತ ಜತೆಗಿನ ಸಂಬಂಧ ಹದಗೆಟ್ಟರೆ ಅಪ್ಘಾನಿಸ್ತಾನ ಗಡಿಯಲ್ಲಿ ನಿಯೋಜಿತವಾಗಿರುವ ತನ್ನ ಸೇನೆಯನ್ನು ಸ್ಥಳಾಂತರಿಸಬೇಕಾಗಬಹುದು ಎಂಬುದಾಗಿ ಪಾಕಿಸ್ತಾನವು ನ್ಯಾಟೊ ಮತ್ತು ಅಮೆರಿಕಾ ಕಮಾಂಡ್‌ಗಳಿಗೆ ಸ್ಪಷ್ಟಪಡಿಸಿರುವ ಬಗ್ಗೆ ಪಾಕ್ ಸೇನೆ ಹಾಗೂ ಗುಪ್ತಚರ ಮೂಲಗಳು ಆಯ್ದ ಪತ್ರಕರ್ತರಿಗೆ ತಿಳಿಸಿದೆ ಎಂದು ಖಾಸಗಿ ವಾಹಿನಿ ಜಿಯೊ ನ್ಯೂಸ್ ವರದಿ ಮಾಡಿದೆ.

ಭಾರತ ಜತೆಗಿನ ತನ್ನ ಗಡಿಯನ್ನು ಕಾಪಾಡುವುದು ಅತ್ಯಗತ್ಯವಾಗಿರುವುದರಿಂದ ಅಪ್ಘಾನಿಸ್ತಾನ ಗಡಿ ಸುತ್ತಲಿನ ಉಗ್ರರ ವಿರುದ್ಧದ ಹೋರಾಟದತ್ತ ಹೆಚ್ಚಿನ ಗಮನ ಕೇದ್ರೀಕರಿಸಲು ಪಾಕ್‌ಗೆ ಸಾಧ್ಯವಾಗದು ಎಂಬುದಾಗಿ ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.

ಮುಂಬೈ ದಾಳಿಯ ನಂತರ ಭಾರತದ ವಿದೇಶಾಂಗ ಸಚಿವರು ದೂರವಾಣಿ ಮೂಲಕ ಪಾಕಿಸ್ತಾನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದ ವೇಳೆ ಕಟು ಶಬ್ದಗಳನ್ನು ಬಳಸಿರುವ ಕಾರಣ ಐಎಸ್ಐ ಮುಖ್ಯ ಶುಜಾ ಪಾಶಾರನ್ನು ಭಾರತಕ್ಕೆ ಕಳುಹಿಸದಿರುವ ನಿರ್ಧಾರ ಕೈಗೊಳ್ಳಲಾಯಿತು ಎಂಬುದಾಗಿ ಮೂಲಗಳು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾಗಿಯೂ ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರಿಗೆ ಬಲಿಯಾದವರಿಗೆ ಇಸ್ರೇಲಿಗಳ ಕಂಬನಿ
ಮುಂಬೈ ದಾಳಿ: ಪ್ರಧಾನಿಗೆ ಒಮಾಮ ಕರೆ
ಉಗ್ರರ ದಾಳಿ: ಭಾರತ-ಪಾಕ್ ಮಾತುಕತೆಗೆ ಧಕ್ಕೆ
ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ: ಒಮಾಮ
ಸೊಮಾಲಿ ಕಡಲ್ಗಳ್ಳರಿಂದ ಮತ್ತೆ ಕಾರ್ಗೊ ಹಡಗು ಅಪಹರಣ
ಭಾರತಕ್ಕೆ ಐಎಸ್‌ಐ ವರಿಷ್ಠರನ್ನು ಕಳುಹಿಸುವುದಿಲ್ಲ: ಪಾಕ್