ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನೈಜಿರಿಯಾ ಕೋಮು ಹಿಂಸಾಚಾರ: ಸಾವಿನ ಸಂಖ್ಯೆ 400ಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೈಜಿರಿಯಾ ಕೋಮು ಹಿಂಸಾಚಾರ: ಸಾವಿನ ಸಂಖ್ಯೆ 400ಕ್ಕೆ
ಎರಡು ದಿನಗಳಿಂದ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದ ನಡುವೆ ಉದ್ಭವಿಸಿದ ಕೋಮು ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 400ಕ್ಕೇರಿದೆ. ಅಲ್ಲದೇ ಜೊಸ್ ನೈಜಿರಿಯಾ ಪಟ್ಟಣದ ಪ್ರಧಾನ ಮಸೀದಿಯಿಂದ ಹಲವಾರು ಮೃತದೇಹವನ್ನು ಸ್ಥಳೀಯ ನಿವಾಸಿಗಳು ಹೊರ ತೆಗೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನೈಜಿರಿಯಾದ ಕ್ರಾಸ್‌ರೋಡ್ ಪ್ರದೇಶದ ಉತ್ತರ ಭಾಗದ ಮುಸ್ಲಿಮ್ ಮತ್ತು ದಕ್ಷಿಣ ಪಟ್ಟಣದ ಕ್ರಿಶ್ಚಿಯನ್ ಸ್ಥಳೀಯ ಚುನಾವಣೆ ಸಂದರ್ಭ ಹಿಂಸಾಚಾರ ಭುಗಿಲೆದ್ದಿದ್ದು, ಧಾರ್ಮಿಕ ಗುಂಪುಗಳು ಮತ್ತು ಎದುರಾಳಿ ಕೋಮುಗಳು ಮನೆ, ಅಂಗಡಿ, ಮಸೀದಿ ಮತ್ತು ಚರ್ಚ್‌ಗಳಿಗೆ ಬೆಂಕಿ ಹಚ್ಚಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ವರದಿ ಪ್ರಕಾರ, ಹಿಂಸಾಚಾರದಲ್ಲಿ ಸುಮಾರು 200 ಮಂದಿ ಬಲಿಯಾಗಿದ್ದಾರೆ. ಆದರೆ ಈ ಬಗ್ಗೆ ನಿಖರ ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ಎಂದು ಮಾಹಿತಿ ಇಲಾಖೆಯ ವರಿಷ್ಠ ನುಹು ಗಗಾರಾ ಹೇಳಿದ್ದಾರೆ.

ಸದ್ಯಕ್ಕೆ ಪರಿಸ್ಥಿತಿಯು ಹತೋಟಿಯಲ್ಲಿದೆ ಮತ್ತು ಬಹುಮಟ್ಟಿಗೆ ಹಿಂಸಾಚಾರವು ಕೊನೆಗೊಂಡಿದೆ. ಆದರೆ ಹಿಂಸಾಚಾರವು ಇತರ ಪ್ರದೇಶಗಳಿಗೆ ಹಬ್ಬುತ್ತಿರುವುದು ದುರದೃಷ್ಟಕರವಾದುದೆಂದು ಗಗಾರಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಿ.3 ರಂದು ರೈಸ್ ಭಾರತಕ್ಕೆ ಭೇಟಿ
ನ್ಯಾಯಕ್ಕಾಗಿ ಶೋಭರಾಜ್ ವಿಶ್ವಸಂಸ್ಥೆಗೆ ಮೊರೆ
ಮುಂಬೈ ದಾಳಿ: ವಿಳಂಬ ಕಾರ್ಯಾಚರಣೆಗೆ ಇಸ್ರೇಲ್ ಟೀಕೆ
ಜಗತ್ತಿನ 20 ದೇಶಗಳು 'ಅತೀ ಅಪಾಯಕಾರಿ': ಟೆಲಿಗ್ರಾಫ್
ಭಾರತ ಗಡಿಯಲ್ಲಿ ಪಾಕ್ ಸೇನೆ ಹೆಚ್ಚಳ?
ಉಗ್ರರಿಗೆ ಬಲಿಯಾದವರಿಗೆ ಇಸ್ರೇಲಿಗಳ ಕಂಬನಿ