ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತ ಅಲ್ಲ, ಲಾಹೋರ್ ಸ್ಫೋಟ ನಾವು ಮಾಡಿದ್ದೆಂದ ಉಗ್ರರು; ಪಾಕ್ ವಂಚನೆ ಬಟಾ ಬಯಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಅಲ್ಲ, ಲಾಹೋರ್ ಸ್ಫೋಟ ನಾವು ಮಾಡಿದ್ದೆಂದ ಉಗ್ರರು; ಪಾಕ್ ವಂಚನೆ ಬಟಾ ಬಯಲು
ಲಾಹೋರ್ ಕಾರ್ ಬಾಂಬ್ ಸ್ಫೋಟದ ಹೊಣೆಯನ್ನು ಅದೇ ನೆಲದ ಉಗ್ರಗಾಮಿ ಸಂಘಟನೆಯೊಂದು ಹೊತ್ತುಕೊಂಡಿದ್ದು, ಭಾರತೀಯರು ಭಾಗಿಯಾಗಿದ್ದಾರೆಂದು ಹೇಳಿ ವಿಶ್ವಕ್ಕೆ ಭಾರತದ ಮತ್ತೊಂದು 'ಮುಖ'ವನ್ನು ತೋರಿಸಲು ಯತ್ನಿಸಿದ್ದ ಪಾಕಿಸ್ತಾನ ತೀವ್ರ ಮುಖಭಂಗಕ್ಕೊಳಗಾಗಿದೆ.

ಬುಧವಾರ ಲಾಹೋರ್‌ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟಕ್ಕೆ ಭಾರತದ ಸತೀಶ್ ಆನಂದ್ ಶುಕ್ಲಾ ಕಾರಣ; ಮ‌ೂಲತಃ ಕೊಲ್ಕತ್ತಾ ನಿವಾಸಿಯಾದ ಆನಂದ್ ಪಾಕಿಸ್ತಾನದಲ್ಲಿ ಮುನೀರ್ ಎಂಬ ಹೆಸರಿನಿಂದ ವಾಸಿಸುತ್ತಿದ್; ಈತ ಭಾರತದ ಗುಪ್ತಚರನಾಗಿದ್ದು, ಲಂಡನ್‌ನ ಭಾರತೀಯ ರಾಯಭಾರ ಕಚೇರಿಯಲ್ಲೂ ಈ ಹಿಂದೆ ಕಾರ್ಯನಿರ್ವಹಿಸಿದವನಾಗಿದ್ದಾನೆ ಎಂದು ಆರೋಪಿಸಿ ಪಾಕಿಸ್ತಾನ ನಿನ್ನೆ ಹೇಳಿಕೆ ನೀಡಿತ್ತು.

ಅದರ ಬೆನ್ನಿಗೆ ಪಾಕಿಸ್ತಾನದ ಉಗ್ರ ಸಂಘಟನೆಯೊಂದು ಲಾಹೋರ್ ಸ್ಫೋಟದ ಹೊಣೆ ಹೊತ್ತುಕೊಂಡು ಹೇಳಿಕೆ ನೀಡಿದೆ. ಇದರಿಂದ ಪಾಕಿಸ್ತಾನ ಮತ್ತೊಮ್ಮೆ ಅಂತಾರಾಷ್ಟ್ರೀಯ ಸಮುದಾಯದೆದುರು ತೀವ್ರ ಮುಖಭಂಗವಾಗಿದ್ದು, ಅದರ ಸುಳ್ಳುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾದಂತಾಗಿದೆ.

ಲಾಹೋರ್‌ನಲ್ಲಿ ಬುಧವಾರ ನಡೆದ ಕಾರ್ ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಪಟ್ಟು ಇತರ ಮ‌ೂವರು ಗಾಯಗೊಂಡಿದ್ದರು. ಇದರ ಹಿಂದೆ ಸತೀಶ್ ಹಾಗೂ ಇತರ ಮ‌ೂವರು ಭಾರತೀಯರು ಕಾರ್ಯಾಚರಿಸಿದ್ದಾರೆ ಎಂಬುದು ಪಾಕಿಸ್ತಾನದ ಹೊಸ ಆರೋಪವಾಗಿತ್ತು. ಇತ್ತೀಚೆಗಷ್ಟೇ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಭಾರತದ ವಾಯುಪಡೆ ವಿಮಾನಗಳು ಪ್ರವೇಶಿಸಿವೆ ಎಂದು ಪಾಕಿಸ್ತಾನ ತಗಾದೆ ತೆಗೆದಿತ್ತು. ಅದು ತಿರುವುಗಳನ್ನು ಪಡೆದುಕೊಳ್ಳುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮತ್ತೊಂದು ನಾಟಕ ಶುರು ಮಾಡಿದ್ದು, ಅದೂ ಬಹುತೇಕ ವಿಫಲವಾದಂತಾಗಿದೆ.

ಇದುವರೆಗೆ ಅಪರಿಚಿತವಾಗಿದ್ದ ಅನ್ಸಾರ್ ಮುಹಾಜಿರ್ ಎಂಬ ಸಂಘಟನೆ ಲಾಹೋರಿನಲ್ಲಿ ಬುಧವಾರ ನಡೆದ ಕಾರು ಬಾಂಬ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಬಣದ ಕಮಾಂಡರ್ ಎಂದು ಹೇಳಿಕೊಂಡ ತೂಫಾನ್ ವಜೀರ್ ಹೆಸರಿನ ವ್ಯಕ್ತಿಯೊಬ್ಬ ಉತ್ತರ ವಜೀರಿಸ್ತಾನದಿಂದ 'ದಿ ನ್ಯೂಸ್' ದೈನಿಕ ಕಚೇರಿಗೆ ಫೋನ್ ಮಾಡಿ, ಲಾಹೋರ್ ಘಟನೆ ಮತ್ತು ಈ ಹಿಂದೆ ಡೇರಾ ಇಸ್ಮಾಯಿಲ್ ಖಾನ್ ನಗರದಲ್ಲಿ ನಡೆದ ರಾಕೆಟ್ ದಾಳಿಗಳಿಗೆ ತಮ್ಮ ಸಂಘಟನೆ ಹೊಣೆ ಎಂದು ಹೇಳಿಕೊಂಡಿದ್ದಾನೆ.

ಉತ್ತರ ವಜೀರಿಸ್ತಾನದಲ್ಲಿ ಇತ್ತೀಚೆಗೆ ಅಮೆರಿಕದ ಕ್ಷಿಪಣಿಗಳ ದಾಳಿಗೆ ಪ್ರತೀಕಾರವಾಗಿ, ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿ ಆತ ಬೆದರಿಕೆಯೊಡ್ಡಿದ್ದಾನೆ. ಅಮೆರಿಕ ದಾಳಿಯಲ್ಲಿ ಪಾಕಿಸ್ತಾನಿ ಪಂಜಾಬ್ ಪ್ರಾಂತ್ಯದಲ್ಲಿ ಹಲವಾರು ಉಗ್ರಗಾಮಿಗಳು ಸಾವನ್ನಪ್ಪಿದ್ದರು.

ವಜೀರ್ ಮತ್ತು ಆತನ ಬಳಗವು ಪಾಕಿಸ್ತಾನಿ ತಾಲಿಬಾನ್‌ನ ಭಾಗ ಎಂಬಂತೆ ತೋರುತ್ತದೆ ಎಂದು ದಿ ನ್ಯೂಸ್ ವರದಿ ಮಾಡಿದೆ.

ಲಾಹೋರ್‌ನಲ್ಲಿ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ, ಗುಪ್ತದಳ ಮತ್ತು ಭದ್ರತಾ ಪಡೆಗಳು ಲಾಹೋರಿನಲ್ಲಿ ಸತೀಶ್ ಆನಂದ್ ಶುಕ್ಲಾ ಹೆಸರಿನ ಭಾರತೀಯನನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಹೇಳಿಕೆ ನೀಡಿ, ವಿಶ್ವದ ಗಮನವನ್ನು ಮುಂಬಯಿ ದಾಳಿಯಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿತ್ತು.

ಗುರುವಾರ ಇನ್ನೂ ಮೂವರು ಭಾರತೀಯರನ್ನು ಬಂಧಿಸಲಾಗಿದೆ ಎಂಬುದಾಗಿ ಜಿಯೋ ಟಿವಿ ವರದಿ ಪ್ರಕಟಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕಿಸ್ತಾನವೂ ಯುದ್ಧ ಬಯಸುತ್ತಿಲ್ಲ: ಗಿಲಾನಿ
ಭಾರತದೊಂದಿಗಿನ ಯುದ್ಧ ಪಾಕ್‌ಗೆ ಅಶುಭವಾಗಲಿದೆ
ಕಸಬ್ ನಾಗರಿಕತ್ವ ಸಾಬೀತಾಗುವವರೆಗೆ ನೆರವಿಲ್ಲ:ಪಾಕ್
ಲಾಹೋರ್ ಸ್ಫೋಟ: ಭಾರತೀಯ ಗುಪ್ತಚರನ ಬಂಧನ
ನಿಮ್ಮ ವೈಫಲ್ಯಕ್ಕೆ ನಮ್ಮನ್ಯಾಕೆ ದೂರುತ್ತೀರಿ: ಭಾರತಕ್ಕೆ ಪಾಕ್ ಪ್ರಶ್ನೆ
ಪಾಕ್ : ಹಣ ನೀಡಿದರೆ ಸುಸೈಡ್ ಬಾಂಬರ್‌ಗಳು ಲಭ್ಯ