ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಡಿಭಾಗದಲ್ಲಿ ಪಾಕ್‌‌ನಿಂದ ಮತ್ತಷ್ಟು ಸೈನಿಕರ ಜಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಡಿಭಾಗದಲ್ಲಿ ಪಾಕ್‌‌ನಿಂದ ಮತ್ತಷ್ಟು ಸೈನಿಕರ ಜಮಾ
ಸೈನಿಕರ ರಜೆಗೂ ಸಂಚಕಾರ!
ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯುವುದಿಲ್ಲ ಎಂಬ ಹೇಳಿಕೆ ನಡುವೆಯೂ, ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಪಾಕ್ ಮತ್ತಷ್ಟು ಸೈನಿಕರನ್ನು ನಿಯೋಜಿಸಿದ್ದು, ಅಲ್ಲದೇ ಈ ಉದ್ವಿಗ್ನ ಸ್ಥಿತಿಯ ಪರಿಣಾಮವಾಗಿ ಸೈನಿಕರ ರಜೆಯನ್ನೂ ರದ್ದುಪಡಿಸಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.

ಪಾಕ್ ಆಕ್ರಮಿತ ಗಡಿರೇಖೆಯಲ್ಲಿ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಹೆಚ್ಚಿನ ಸೈನಿಕರನ್ನು ನಿಯೋಜಿಸಿದೆ. ಯಾವುದೇ ಸಂದರ್ಭದಲ್ಲೂ ಸಮರ ನಡೆದರೂ ಕೂಡ ತಾವು ಅದಕ್ಕೆ ಸಿದ್ದ ಎಂಬ ನಿಟ್ಟಿನಲ್ಲಿ ಪಾಕ್ ಸೈನಿಕರ ರಜೆಯನ್ನೂ ರದ್ದುಪಡಿಸಿ, ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಮಿಲಿಟರಿ ವರಿಷ್ಠಾಧಿಕಾರಿಗಳು ಸೂಚನೆ ನೀಡಿರುವುದಾಗಿ ಡಾನ್ ನ್ಯೂಸ್ ಚಾನೆಲ್ ವರದಿ ವಿವರಿಸಿದೆ.

ಆದರೆ ಗಡಿಭಾಗದಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿರುವ ಬಗ್ಗೆ ರಕ್ಷಣಾ ವಿಭಾಗ ಯಾವುದೇ ವಿವರನ್ನು ನೀಡಲು ನಿರಾಕರಿಸಿದೆ. ಆದರೆ ಲಾಹೋರ್ ಸೆಕ್ಟರ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನಾಪಡೆಯನ್ನು ನಿಯೋಜಿಸಿರುವ ವರದಿಯನ್ನು ಅದನ್ನು ತಳ್ಳಿಹಾಕಿಲ್ಲ ಎಂದು ಡೈಲಿ ಟೈಮ್ಸ್ ವರದಿ ಹೇಳಿದೆ.

ಅದೇ ರೀತಿ ಆರ್ಮಿಯ 10 ಮತ್ತು 11ನೇ ತಂಡಗಳು ಕಾಶ್ಮೀರ ಭಾಗದ ರಾಜೌರಿ ಮತ್ತು ಪೂಂಜ್‌ಗಳಲ್ಲಿ ಕಟ್ಟೆಚ್ಚರದಲ್ಲಿ ಕಾವಲು ಕಾಯುತ್ತಿದೆ. ಹೆಚ್ಚಿನ ಸೈನಿಕ ಪಡೆಗಳೂ ಕೂಡ ಪಾಕ್ ಆಕ್ರಮಿತ ಗಡಿಭಾಗವನ್ನು ಸುತ್ತುವರಿದಿರುವುದಾಗಿಯೂ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೂರು ನಿಮಿಷದಲ್ಲಿ ಆರು ಮಕ್ಕಳ ಹೆತ್ತಳಾ ತಾಯಿ!
ಶಾಂತಿಪಡೆಯ ವಿಶೇಷ ರಾಯಭಾರಿಯಾಗಿ ಬಿಲ್ ಕ್ಲಿಂಟನ್ ಸಾಧ್ಯತೆ
ಭಾರತ ಅಲ್ಲ, ಲಾಹೋರ್ ಸ್ಫೋಟ ನಾವು ಮಾಡಿದ್ದೆಂದ ಉಗ್ರರು; ಪಾಕ್ ವಂಚನೆ ಬಟಾ ಬಯಲು
ಪಾಕಿಸ್ತಾನವೂ ಯುದ್ಧ ಬಯಸುತ್ತಿಲ್ಲ: ಗಿಲಾನಿ
ಭಾರತದೊಂದಿಗಿನ ಯುದ್ಧ ಪಾಕ್‌ಗೆ ಅಶುಭವಾಗಲಿದೆ
ಕಸಬ್ ನಾಗರಿಕತ್ವ ಸಾಬೀತಾಗುವವರೆಗೆ ನೆರವಿಲ್ಲ:ಪಾಕ್