ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ಮುತ್ತಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ಮುತ್ತಿಗೆ
ಪಾಲಿಸ್ತೇನ್‌ನ ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿಗಳ ಮೇಲೆ ದಾಳಿಯನ್ನು ಮುಂದುವರಿಸಿದ್ದು, ಇಂದು ಸ್ವಯಂಚಾಲಿತ ಗನ್, ಸ್ಫೋಟಕಗಳು ಸೇರಿದಂತೆ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ. ಜತೆಗೆ ಇಸ್ರೇಲ್ ಸೇನೆಯ ಅತ್ಯಾಧುನಿಕ ವಾಹನಗಳನ್ನು ಛೂ ಬಿಟ್ಟಿದ್ದು, ಸೈನಿಕರ ಜತೆಗೆ ಭೂ ದಾಳಿ ಆರಂಭಿಸಿದೆ.

ಇಂದು ಇಸ್ರೇಲ್ ನಡೆಸಿರುವ ಭೂ ದಾಳಿಯಲ್ಲಿ ಹಲವು ಪ್ಯಾಲೆಸ್ತೇನೀಯರು ಸಾವನ್ನಪ್ಪಿದ್ದಾರೆ ಎಂದು ಮ‌ೂಲಗಳು ತಿಳಿಸಿವೆ. ಕಳೆದೊಂದು ವಾರದಿಂದ ನಡೆಯುತ್ತಿರುವ ವಾಯುದಾಳಿಯ ನಂತರ ಇದೀಗ ಭೂ ದಾಳಿಯನ್ನೂ ನಡೆಸಲಾಗುತ್ತಿದೆ. ಶಸ್ತ್ರಸಜ್ಜಿತ ಸೈನಿಕರು ಗಾಜಾ ಪಟ್ಟಿಯಲ್ಲಿ ಹೋರಾಟ ನಿರತರಾಗಿದ್ದು ಈ ವರೆಗೆ ಸುಮಾರು 460 ಮಂದಿ ಯುದ್ಧದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಇಸ್ರೇಲ್ ಸೈನಿಕರಿಗೆ ಹಮಾಸ್ ಕೂಡ ತೀವ್ರ ಪ್ರತಿರೋಧ ತೋರಿಸುತ್ತಿದೆ. ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸುತ್ತಿದ್ದರೆ, ಇತ್ತ ಹಮಾಸ್ ಕೂಡ ದಕ್ಷಿಣ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡುತ್ತಿದೆ. ಉಗ್ರರ ನೆಲೆಗಳನ್ನು ಸಂಪೂರ್ಣ ಧ್ವಂಸಗೊಳಿಸಲು ಸೈನಿಕರನ್ನು ಬಳಸುತ್ತಿದ್ದು, ಇದು ತಾತ್ಕಾಲಿಕ ಎಂದು ಇಸ್ರೇಲ್ ಸೇನೆ ಮ‌ೂಲಗಳು ತಿಳಿಸಿವೆ.


ಕಳೆದೆಂಟು ದಿನಗಳಿಂದ ನಡೆಯುತ್ತಿರುವ ಈ ದಾಳಿಯಲ್ಲಿ ಭಾರೀ ಸಂಖ್ಯೆಯ ನಾಗರಿಕರು ಸಾವನ್ನಪ್ಪಿದ್ದಾರೆ. ಇಲ್ಲಿ ಹಮಾಸ್ ಅಥವಾ ಇಸ್ರೇಲ್ ಎರಡೂ ಕೂಡ ತಮ್ಮ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಿವೆ. ಕೊನೆಯ ಉಸಿರಿರುವವರೆಗೂ ನಾವು ಹೋರಾಡುತ್ತೇವೆ ಎಂದು ಹಮಾಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗಾಜಾದಲ್ಲಿನ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಲು ಅಮೆರಿಕಾವು ತನ್ನ ಭದ್ರತಾ ದಳದ ತುರ್ತು ಸಭೆಯನ್ನು ಕೂಡ ನಡೆಸುತ್ತಿದೆ. ಯುದ್ಧ ನಿಲ್ಲಿಸಬೇಕೆಂಬ ಒತ್ತಾಯ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಜತೆ ಗಡಿಪಾರು ಒಪ್ಪಂದವಿಲ್ಲ: ಪಾಕ್
ಪಾಕ್ ಶಂಕಿತರ ವಿಚಾರಣೆಗೆ ಭಾರತಕ್ಕೆ ಅವಕಾಶ: ವರದಿ
ಮುಂಬೈ ದಾಳಿ ಹಿಂದೆ ಪಾಕಿಸ್ತಾನ: ಸಲ್ಮಾನ್ ರಶ್ದೀ
ಕೊನೆಗೂ ಪ್ಯಾರಿಸ್‌ನಲ್ಲಿ ವಾಸ್ತವ್ಯ ಹೂಡಿದ ತಸ್ಲೀಮಾ
ಎಲ್‌ಟಿಟಿಇ ವಿರುದ್ಧ ದಾಳಿ ಮುಂದುವರಿಸಿದ ಲಂಕಾ
ಚೀನಾ: ರಾಸಾಯನಿಕ ಉತ್ಪನ್ನ ಕೇಂದ್ರದಲ್ಲಿ ಸ್ಫೋಟ-5ಬಲಿ