ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾಂಗ್ಲಾದೇಶದ ನಿಯೋಜಿತ ರಾಷ್ಟ್ರಪತಿ ರೆಹಮಾನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಂಗ್ಲಾದೇಶದ ನಿಯೋಜಿತ ರಾಷ್ಟ್ರಪತಿ ರೆಹಮಾನ್
ಅವಾಮಿ ಲೀಗ್‌ನ ನೇತಾರರಾದ ಜಿಲ್ಲುರ್ ರೆಹಮಾನ್ ಬಾಂಗ್ಲಾದೇಶದ ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ ಎಂದು ಅಲ್ಲಿನ ನೂತನ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಬಾಂಗ್ಲಾ ಚುನಾವಣೆಯಲ್ಲಿ ಹಸೀನಾರ ಅವಾಮಿ ಲೀಗ್ ಭರ್ಜರಿ ಜಯ ಸಾಧಿಸಿತ್ತು. ಪ್ರಸಕ್ತ ರಾಷ್ಟ್ರಪತಿ ಇಯಾಜುದ್ದೀನ್ ಅಹಮದ್‍ರ ಆಧಿಕಾರ ಕೊನೆಗೊಂಡ ನಂತರ ರೆಹಮಾನ್ ಬಾಂಗ್ಲಾದೇಶದ ಮುಂದಿನ ರಾಷ್ಟ್ರಪತಿಯಾಗಬೇಕೆಂದು ಅವಾಮಿ ಲೀಗ್‌ನ ಸಂಸದೀಯ ಮಂಡಳಿ ನಿರ್ಣಯ ಕೈಗೊಂಡಿದೆ ಎಂದು ಹಸೀನಾ ತಿಳಿಸಿದ್ದಾರೆ.

ತಮ್ಮ ಜೀವನದ 80 ವಸಂತಗಳನ್ನು ದಾಟಿರುವ ರೆಹಮಾನ್‌ರನ್ನು ರಾಷ್ಟ್ರೀಯ ಅಸೆಂಬ್ಲಿಯ ಉಪಾಧ್ಯಕ್ಷರನ್ನಾಗಿ ಆರಿಸಲಾಗಿದೆ. ಅವರು ರಾಷ್ಟ್ರಪತಿಭವನಕ್ಕೆ ತೆರಳುವ ವೇಳೆಗೆ ಈ ಪದವಿಯನ್ನು ತ್ಯಜಿಸುತ್ತಾರೆ ಎಂದು ಅವರು ಹೇಳಿದ್ದಾರೆ.

"ರೆಹಮಾನ್ ನಮ್ಮ ಪಕ್ಷದ ಹಿರಿಯ ಸದಸ್ಯರು, ಬಾಂಗ್ಲಾದೇಶದ ರಾಜಕೀಯ ಮತ್ತು ಪಕ್ಷಕ್ಕಾಗಿ ಅವರು ಬಹಳಷ್ಟು ಶ್ರಮ ವಹಿಸಿದ್ದಾರೆ ಆದ್ದರಿಂದ ನಾವು ಅವರನ್ನು ಸನ್ಮಾನಿಸಲು ಬಯಸುತ್ತೇವೆ. 1952ರ ಭಾಷಾ ಅಂದೋಲನವು ಸೇರಿದಂತೆ ನಮ್ಮ ಎಲ್ಲಾ ಹೋರಾಟಗಳಿಗೂ ಅವರು ಬೆನ್ನೆಲುಬಾಗಿದ್ದರು" ಎಂದು ಹಸೀನಾ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ಮುತ್ತಿಗೆ
ಶಂಕಿತ ಉಗ್ರರ ಹಸ್ತಾಂತರ ಅಸಾಧ್ಯ: ಪಾಕಿಸ್ತಾನ
ಪಾಕ್ ಶಂಕಿತರ ವಿಚಾರಣೆಗೆ ಭಾರತಕ್ಕೆ ಅವಕಾಶ: ವರದಿ
ಮುಂಬೈ ದಾಳಿ ಹಿಂದೆ ಪಾಕಿಸ್ತಾನ: ಸಲ್ಮಾನ್ ರಶ್ದೀ
ಕೊನೆಗೂ ಪ್ಯಾರಿಸ್‌ನಲ್ಲಿ ವಾಸ್ತವ್ಯ ಹೂಡಿದ ತಸ್ಲೀಮಾ
ಎಲ್‌ಟಿಟಿಇ ವಿರುದ್ಧ ದಾಳಿ ಮುಂದುವರಿಸಿದ ಲಂಕಾ