ಈಶಾನ್ಯ ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನದಲ್ಲಿ ಸೋಮವಾರ ಮುಂಜಾನೆ ಪ್ರಬಲ ಭೂಕಂಪ ಉಂಟಾಗಿದೆ. ಭೂಕಂಪನಕ್ಕೆ ಭಯಭೀತರಾದ ಜನರು ಮನೆತೊರೆದು ಓಟ ಕಿತ್ತಿದ್ದು, ಇದುವರೆಗೆ ಯಾವುದೇ ಸಾವು-ನೋವುಗಳ ಬಗೆಗಿನ ವರದಿ ಲಭ್ಯವಾಗಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ.
ರಿಕ್ಟರ್ ಮೂಪನದಲ್ಲಿ 6.0ರಷ್ಟಿದ್ದ ಪ್ರಬಲ ಭೂಕಂಪನದಲ್ಲಿ ಭಾರತೀಯ ಕಾಲಮಾನದ ಪ್ರಕಾರ 3.43ಕ್ಕೆ ಅಫ್ಘಾನ್ ರಾಜಧಾನಿ ಕಾಬೂಲ್‌ನ ಈಶಾನ್ಯ ಭಾಗದ 170ಕಿ.ಮೀ ದೂರದ ಪಾಕಿಸ್ತಾನದ ಗಡಿಪ್ರದೇಶದಲ್ಲಿ ಕಂಪನ ಉಂಟಾಗಿದೆಯೆಂದು ಅಮೆರಿಕ ಭೂಗರ್ಭ ಸರ್ವೆಕ್ಷಣಾ ವಿಭಾಗವು ತಿಳಿಸಿವೆ.
ಹಿಂದೂ ಕುಶ್ ಕಣಿವೆ ಪ್ರದೇಶದಲ್ಲಿ ಭೂಕಂಪನದ ಪ್ರಬಲತೆಯು 190 ಕೀ.ಮೀ ಆಳದ ತನಕವಿತ್ತೆಂದು ವರದಿಯು ತಿಳಿಸುತ್ತದೆ. ಪ್ರಾಥಮಿಕ ವರದಿಗಳ ಪ್ರಕಾರ ಗಾಯಾಗೊಂಡವರ ಮತ್ತು ಸಾವಿನ ಕುರಿತಾಗಿನ ವಿವರ ಲಭ್ಯವಾಗಿಲ್ಲ.
ಅಕ್ಟೋಬರ್ 2005ರಲ್ಲಿ ವಾಯುವ್ಯ ಪಾಕಿಸ್ತಾನ ಮತ್ತು ಕಾಶ್ಮೀರ ಪ್ರದೇಶದಲ್ಲಿ ರಿಕ್ಟರ್ ಮಾಪನದ 7.6 ಪ್ರಬಲತೆಯ ಭೂಕಂಪದಲ್ಲಿ 74,000ಮಂದಿ ಸಾವಿಗೀಡಾಗಿದ್ದು, ಮೂರುವರೇ ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿತ್ತು.
|