ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇರಾಕ್ ತೈಲ ಉತ್ಪನ್ನ ಕೇಂದ್ರಗಳಿಗೆ ಚೀನಾ ಲಗ್ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾಕ್ ತೈಲ ಉತ್ಪನ್ನ ಕೇಂದ್ರಗಳಿಗೆ ಚೀನಾ ಲಗ್ಗೆ
ಕೊನೆಗೂ ಇರಾಕ್‌ನ ತೈಲ ಉತ್ಪನ್ನ ಕೇಂದ್ರಗಳಿಗೆ ಲಗ್ಗೆಯಿಡುವ ಚೀನಾದ ಬಯಕೆಯು ಈಡೇರಿದಂತಾಗಿದ್ದು, ಯಾವುದೇ ವಿದೇಶಿ ತೈಲ ಕಂಪೆನಿಗಳು ಇರಾಕ್‌ನಲ್ಲಿ ಕೆಲಸ ಕೈಗೊಳ್ಳುವುದನ್ನು ಸದ್ದಾಂ ಹುಸೇನ್ 1972 ನಿಷೇಧಿಸಿದ್ದರಲ್ಲದೆ ಉದ್ದಿಮೆಯನ್ನು ರಾಷ್ಟ್ರೀಕೃತಗೊಳಿಸಿದ್ದರು.

ಪ್ರಸ್ತುತ ಇರಾಕ್ ಸರಕಾರದಿಂದ ಚೀನಾದ ರಾಷ್ಟ್ರೀಯ ತೈಲ ಕಾರ್ಪೋರೇಶನ್ ಇರಾಕ್‌ನಲ್ಲಿ ತೈಲ ಕೆಲಸವನ್ನು ಆರಂಭಿಸಲು ಅನುಮತಿಯನ್ನು ಪಡೆಯುವ ಮ‌ೂಲಕ 30ವರ್ಷಗಳಿಂದ ವಿದೇಶಿ ಕಂಪನಿಗಳಿಗಿದ್ದ ವಿರಾಮವನ್ನು ನೀಗಿಸಿದಂತಾಗಿದೆ.

ಇರಾಕ್‌ ಪೂರ್ವ ಪ್ರಾಂತ್ಯ ಪ್ರದೇಶವಾದ ವಾಸಿತ್ ಎಂಬಲ್ಲಿ ಸಿಎನ್‌ಪಿಸಿ ತನ್ನ ಹಳೆಯ 3 ಮಿಲಿಯನ್ ಅಮೆರಿಕನ್ ಡಾಲರ್ ತೈಲ ಅಭಿವೃದ್ಧಿ ಯೋಜನೆಯ ಕೆಲಸವನ್ನು ಪ್ರಾರಂಭಿಸಿದೆ. ಸಿಎನ್‌ಪಿಸಿ ಯೋಜನೆಯನ್ನು ಸದ್ದಾಂರ ಆಳ್ವಿಕೆ ಕಾಲದಲ್ಲಿ ಸಂಧಾನ ಮಾಡಿಕೊಳ್ಳಲಾಗಿತ್ತು. ಆದರೆ ಕೆಲವು ಸಮಯದ ನಂತರ ಕಾರ್ಖಾನೆಗಳನ್ನು ರಾಷ್ಟ್ರೀಕೃತಗೊಳಿಸುವುದರ ಮ‌ೂಲಕ ಯೋಜನೆಯನ್ನು ಸದ್ದಾಂ ತಿರಸ್ಕರಿಸಿದ್ದರು. ಇದೀಗ ಯೋಜನೆಯು ಪುನಶ್ಚೇತನಗೊಂಡಿದ್ದು ಹೊಸ ರೂಪುರೇಶೆಯನ್ನು ಪಡೆದಿದೆ.

ಸಿಎನ್‌ಪಿಸಿ ನವೆಂಬರ್ ತಿಂಗಳಲ್ಲಿ ಮುಂದಿಟ್ಟ ಪ್ರಸ್ತಾಪವನ್ನು ಪ್ರಸ್ತುತ ಅಧಿಕಾರದಲ್ಲಿರುವ ಇರಾಕ್ ಸರಕಾರವು ಸ್ವೀಕರಿಸುವ ಮ‌ೂಲಕ ಸಂಧಿಯು ನವೀಕರಣಗೊಂಡಿದೆ. ಹೊಸ ಸಂಧಾನದಂತೆ ತೈಲವನ್ನು ಇರಾಕ್ ಕಂಪನಿಯು ಹತೋಟಿಯಲ್ಲಿಡಲಿದ್ದು, ವಿದೇಶಿ ಕಂಪೆನಿಗಳ ಕೆಲಸಗಾರರಿಗೆ ಭತ್ತೆಯನ್ನು ನೀಡಲಿದ್ದಾರೆ.

ಪ್ರಸ್ತುತ ಒಪ್ಪಂದದ ಮ‌ೂಲಕ ಚೀನಾಕ್ಕೆ ತೈಲ ಉತ್ಪಾದನೆಯಲ್ಲಿ ನೇರ ಪಾಲು ಸಿಗದಿದ್ದರೂ ಈ ಒಪ್ಪಂದದ ಮ‌ೂಲಕ ಇರಾಕ್ ಸರಕಾರಿ ಅಧಿಕಾರಿ ವರ್ಗದವರೊಡನೆ ಉತ್ತಮ ಭಾಂದವ್ಯವನ್ನು ಹೊಂದಲಿದೆ. ಈ ಮ‌ೂಲಕ ಚೀನಾದ ತೈಲ ದಾಹವು ನಿಧಾನವಾಗಿ ಪೂರೈಕೆಯಾಗಲಿದೆಯೆಂಬುದು ವಿಶ್ಲೇಷಕರ ಅಭಿಪ್ರಾಯ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತೀಯ ಕೋಳಿಮಾಂಸ ಯುಎಇ ನಿಷೇಧ ಮುಂದುವರಿಕೆ
ಅಫ್ಘಾನ್ ಮತ್ತು ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ
ದಾಳಿ: ಎಫ್‌‌ಬಿಐನಿಂದ ಪಾಕ್‌‌ಗೆ ಪುರಾವೆ ಹಸ್ತಾಂತರ
ಬಾಂಗ್ಲಾದೇಶದ ನಿಯೋಜಿತ ರಾಷ್ಟ್ರಪತಿ ರೆಹಮಾನ್
ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ಮುತ್ತಿಗೆ
ಶಂಕಿತ ಉಗ್ರರ ಹಸ್ತಾಂತರ ಅಸಾಧ್ಯ: ಪಾಕಿಸ್ತಾನ