ಎಲ್‌ಟಿಟಿಇಯ ಅಘೋಷಿತ ರಾಜಧಾನಿಯಾಗಿರುವ ಕಿಲಿನೊಚ್ಚಿಯನ್ನು ಶ್ರೀಲಂಕಾ ಸೇನಾ ಪಡೆ ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ, ತಮಿಳು ಟೈಗರ್‌ಗಳ ಕೊನೆಯ ಕಾರಸ್ಥಾನವಾಗಿರುವ ಮುಲ್ಲೈತಿವ್ ಅನ್ನು ವಶಪಡಿಸಿಕೊಳ್ಳುವಲ್ಲಿ ನಡೆಸುತ್ತಿರುವ ಹೋರಾಟದಲ್ಲಿ 40ಮಂದಿ ಸೈನಿಕರು ಸಾವನ್ನಪ್ಪಿರುವುದಾಗಿ ವರದಿಯೊಂದು ತಿಳಿಸಿದೆ.
ಉತ್ತರ ದ್ವೀಪ ಪ್ರದೇಶವಾಗಿರುವ ಎಲ್‌ಟಿಟಿಇ ಪ್ರಾಬಲ್ಯದ ಮುಲ್ಲೈತಿವ್‌ನ ಪ್ರಮುಖ ಬೀದಿಯಲ್ಲಿ ಇತ್ತಂಡಗಳ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 40ಸೇನಾ ಯೋಧರು ಸಾವನ್ನಪ್ಪಿರುವುದಾಗಿ ಎಲ್‌ಟಿಟಇ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ಅಲ್ಲದೇ, ಮುಲ್ಲೈತಿವ್ ಸದ್ಯದ ಸ್ಥಿತಿಯಲ್ಲೂ ತಮಿಳು ಟೈಗರ್ಸ್ ಬಂಡುಕೋರರ ಹಿಡಿದಲ್ಲಿಯೇ ಇದೆ ಎಂದು ಹೇಳಲಾಗಿದೆ. ಆದರೆ ಸೇನಾ ಯೋಧರು ಸಾವನ್ನಪ್ಪಿರುವ ವರದಿಯನ್ನು ಮಿಲಿಟರಿ ಅಧಿಕಾರಿಗಳು ತಳ್ಳಿಹಾಕಿದ್ದು, ಎಲ್‌ಟಿಟಿಇ ಭಾರೀ ಪ್ರಮಾಣದಲ್ಲಿ ಸಾವು-ನೋವನ್ನಪ್ಪುವ ಮೂಲಕ ಕಂಗೆಟ್ಟಿರುವುದಾಗಿ ತಿಳಿಸಿದೆ.
ಪೂರ್ವ ಪಾರನಾಥನ್ ಜಂಕ್ಷನ್ ಬಳಿ ನಡೆದ ಘರ್ಷಣೆಯಲ್ಲಿ ಅಂದಾಜು 80ಮಂದಿ ಲಂಕಾ ಸೈನಿಕರು ಗಾಯಗೊಂಡಿರುವುದಾಗಿ ಎಲ್‌ಟಿಟಇ ವೆಬ್‌ಸೈಟ್‌ನ ವರದಿ ಹೇಳಿದೆ. |