ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಶುಪತಿನಾಥ: ಅರ್ಚಕರ ವಜಾಕ್ಕೆ ನೇಪಾಳಿ ಜನರ ಆಕ್ರೋಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಶುಪತಿನಾಥ: ಅರ್ಚಕರ ವಜಾಕ್ಕೆ ನೇಪಾಳಿ ಜನರ ಆಕ್ರೋಶ
ವಿಶ್ವಪ್ರಸಿದ್ಧ ಪಶುಪತಿನಾಥ ದೇಗುಲದ ಶತಮಾನಗಳ ಪರಂಪರೆಯನ್ನು ಮುರಿದು ಕರ್ನಾಟಕ ಮೂಲದ ಅರ್ಚಕರನ್ನು ವಜಾಗೊಳಿಸಿರುವ ಮಾವೋವಾದಿ ಸರ್ಕಾರದ ವಿರುದ್ಧ ನೇಪಾಳದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇಪಾಳದ ಜನತೆಯ ನಿಯೋಗವೊಂದು ಅಧ್ಯಕ್ಷ ರಾಮ್ ಭರಣ್ ಯಾದವ್ ಅವರನ್ನು ಭೇಟಿಯಾಗಿ ವಿವಾದ ಇತ್ಯರ್ಥಗೊಳಿಸಲು ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

ಸುಪ್ರಭಾ ಗಿಮೈರ್ ಅವರ ನೇತೃತ್ವದ ಈ ನಿಯೋಗದಲ್ಲಿ ಭಂಡಾರಿಗಳು ಮತ್ತು ನಾಗರಿಕ ಸಮಾಜದ ಮುಖಂಡರು ಸೇರಿದ್ದರು. ಮಾವೋವಾದಿ ಸರ್ಕಾರದ ಕ್ರಮ ಸರಿಯಲ್ಲ ಎಂದು ಹೇಳಿರುವ ಅಧ್ಯಕ್ಷ ಯಾದವ್, ಈ ಕುರಿತು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ. ಏತನ್ಮಧ್ಯೆ ಸರ್ಕಾರದ ಕ್ರಮ ವಿರೋಧಿಸಿ ದೇವಾಲಯದಲ್ಲಿ ಕರ್ನಾಟಕದ ಅರ್ಚಕರ ಸಹಾಯಕಿದ್ದ 108ಭಂಡಾರಿಗಳು ತಮ್ಮ ಸೇವೆಯನ್ನು ಬಹಿಸ್ಕರಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌ಟಿಟಿಇ ದಾಳಿಗೆ 40 ಸೈನಿಕರು ಬಲಿ: ವರದಿ
ಇರಾಕ್ ತೈಲ ಉತ್ಪನ್ನ ಕೇಂದ್ರಗಳಿಗೆ ಚೀನಾ ಲಗ್ಗೆ
ಭಾರತೀಯ ಕೋಳಿಮಾಂಸ ಯುಎಇ ನಿಷೇಧ ಮುಂದುವರಿಕೆ
ಅಫ್ಘಾನ್ ಮತ್ತು ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ
ದಾಳಿ: ಎಫ್‌‌ಬಿಐನಿಂದ ಪಾಕ್‌‌ಗೆ ಪುರಾವೆ ಹಸ್ತಾಂತರ
ಬಾಂಗ್ಲಾದೇಶದ ನಿಯೋಜಿತ ರಾಷ್ಟ್ರಪತಿ ರೆಹಮಾನ್