ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ರಕ್ತದೋಕುಳಿ ಹರಿಸುತ್ತಿರುವ ಇಸ್ರೇಲ್ ಆರ್ಮಿ ಪಡೆ...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಕ್ತದೋಕುಳಿ ಹರಿಸುತ್ತಿರುವ ಇಸ್ರೇಲ್ ಆರ್ಮಿ ಪಡೆ...
ಗಾಜಾ ನಗರದತ್ತ ಮುನ್ನುಗ್ಗುತ್ತಿರುವ ಇಸ್ರೇಲ್ ಸೇನೆ
ಇಸ್ರೇಲ್ ಸೇನಾಪಡೆ ಗಾಜಾಪಟ್ಟಿಯ ಮೇಲೆ ಸೋಮವಾರವೂ ಯುದ್ಧವನ್ನು ಮುಂದುವರಿಸಿದ್ದು, ಗಾಜಾನಗರದತ್ತ ಮುನ್ನುಗ್ಗುತ್ತಿದ್ದು, ಈವರೆಗೆ ದಾಳಿಗೆ 515ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.

ಗಾಜಾ ಮೇಲಿನ ದಾಳಿಯನ್ನು ಕೂಡಲೇ ನಿಲ್ಲಿಸಬೇಕೆಂದು ಜಾಗತಿಕ ಮಟ್ಟದಲ್ಲಿ ಕೂಗು ಕೇಳಿ ಬರುತ್ತಿದ್ದರೂ ಕೂಡ, ಇಸ್ರೇಲ್ ದಾಳಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಏತನ್ಮಧ್ಯೆ ಹಲವು ದಶಕಗಳ ಗಾಜಾಪಟ್ಟಿ ವಿವಾದದ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆಗಾಗಿ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ಇಸ್ರೇಲ್‌ಗೆ ಆಗಮಿಸಿದ್ದಾರೆ.

ಇಸ್ರೇಲ್ ಹಾಗೂ ಹಮಸ್ ಉಗ್ರರ ನಡುವೆ ಭಾರೀ ನಡುವೆ ಘರ್ಷಣೆ ನಡೆಯುತ್ತಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ 500ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಗಾಜಾಪಟ್ಟಿಯಾದ್ಯಂತ ರಕ್ತದೋಕುಳಿ ಹರಿದಿದ್ದು, ಎಲ್ಲಡೆ ಆಕ್ರಂದನ ಕೇಳಿಸುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸೋಮವಾರ ಇಸ್ರೇಲ್ ಗಾಜಾಪಟ್ಟಿ ಮೇಲೆ ನಡೆಸಿದ ಪ್ರತ್ಯೇಕ ಎರಡು ವೈಮಾನಿಕ ದಾಳಿಯಲ್ಲಿ ಐದು ಮಂದಿ ಮಕ್ಕಳು ಸಾವಿಗೀಡಾಗಿರುವುದಾಗಿ ಪ್ಯಾಲೇಸ್ತೇನ್ ಆಸ್ಪತ್ರೆ ಮೂಲಗಳು ಹೇಳಿವೆ.

ಸದ್ಯದ ಸ್ಥಿತಿಯಲ್ಲಿ ಗಾಜಾ ಪ್ರದೇಶದಲ್ಲಿ ವಿದ್ಯುತ್ ಇಲ್ಲ, ನೀರಿಲ್ಲ, ಆಹಾರ ಕೊರತೆಯಿಂದಾಗಿ ಜನರು ಕಂಗಾಲಾಗಿದ್ದು, ಆಸ್ಪತ್ರೆಗಳು ಕೇವಲ ಜನರೇಟರ್‌ ಮೂಲಕ ದೀಪದ ವ್ಯವಸ್ಥೆ ಮಾಡಿಕೊಂಡಿರುವುದಾಗಿ ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಶುಪತಿನಾಥ: ಅರ್ಚಕರ ವಜಾಕ್ಕೆ ನೇಪಾಳಿ ಜನರ ಆಕ್ರೋಶ
ಎಲ್‌ಟಿಟಿಇ ದಾಳಿಗೆ 40 ಸೈನಿಕರು ಬಲಿ: ವರದಿ
ಇರಾಕ್ ತೈಲ ಉತ್ಪನ್ನ ಕೇಂದ್ರಗಳಿಗೆ ಚೀನಾ ಲಗ್ಗೆ
ಭಾರತೀಯ ಕೋಳಿಮಾಂಸ ಯುಎಇ ನಿಷೇಧ ಮುಂದುವರಿಕೆ
ಅಫ್ಘಾನ್ ಮತ್ತು ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ
ದಾಳಿ: ಎಫ್‌‌ಬಿಐನಿಂದ ಪಾಕ್‌‌ಗೆ ಪುರಾವೆ ಹಸ್ತಾಂತರ