ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಹಾಗೂ ಆತನ ಪ್ರಮುಖ ಬೆಂಬಲಿಗರು ಕೇರಳಕ್ಕೆ ಪರಾರಿಯಾಗುವ ಸಾಧ್ಯತೆ ಇರುವುದಾಗಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.
ಶ್ರೀಲಂಕಾದ ಸೇನಾ ಪಡೆ ತಮಿಳು ಬಂಡುಕೋರರ ಅಘೋಷಿತ ರಾಜಧಾನಿಯಾಗಿದ್ದ ಕಿಲಿನೊಚ್ಚಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಬಳಿಕ, ಸೇನಾ ಕಾರ್ಯಾಚರಣೆ ಮುಂದುವರಿಸಿದೆ. ಇದೀಗ ಎಲ್‌ಟಿಟಿಇ ಬಲ ಕುಗ್ಗಿರುವ ಹಿನ್ನೆಲೆಯಲ್ಲಿ ತಮಿಳು ಟೈಗರ್‌ಗಳು ಪ್ರತಿರೋಧ ಒಡ್ಡಲು ಸಾಧ್ಯವಾಗದೆ ಪಲಾಯನಗೈಯುತ್ತಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಎಲ್‌ಟಿಟಿಇ ವರಿಷ್ಠ ಪ್ರಭಾಕರನ್ ಕೇರಳಕ್ಕೆ ಪಲಾಯನಗೈಯುವ ಸಾಧ್ಯತೆ ಇರುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದು, ನೌಕಾ ಹಾಗೂ ಕರಾವಳಿ ಪಡೆಗಳು ವಿಷೇಶ ನಿಗಾ ವಹಿಸುವಂತೆ ಸೂಚಿಸಿದೆ.
ಅಲ್ಲದೇ ಕೇರಳದ ಮೀನುಗಾರಿಕಾ ಬಂದರುಗಳ ಮೇಲೂ ತೀವ್ರ ನಿಗಾ ಇರಿಸಲು ಎಚ್ಚರಿಕೆ ನೀಡಲಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮೂಲಗಳು ಹೇಳಿದೆ. |