ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ವಿಶೇಷ ರಾಯಭಾರಿ ನೇಮಿಸುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಅವರ ಹೇಳಿಕೆ ವಿದೇಶಾಂಗ ನೀತಿಯ ಮೊದಲ ತಪ್ಪು ಹೆಜ್ಜೆ ಎಂದು ದಕ್ಷಿಣ ಏಷ್ಯಾ ಕುರಿತ ಅಮೆರಿಕದ ಖ್ಯಾತ ವಿಶ್ಲೇಷಕ ವುಡ್ರೋ ವಿಲ್ಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ವಿಷಯ ಅತ್ಯಂತ ಕ್ಲಿಷ್ಟವಾದುದು. ಈ ವಿಷಯದಲ್ಲಿ ಅಮೆರಿಕದ ಮಧ್ಯಪ್ರವೇಶವನ್ನು ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಒಪ್ಪುವುದಿಲ್ಲ. ಜೊತೆಗೆ ಕಾಶ್ಮೀರ ಸಮಸ್ಯೆ ಎಂದು ಬಣ್ಣಿಸುವ ಮೂಲಕ ಒಬಾಮ ಪ್ರತ್ಯೇಕತವಾದಿಗಳಿಗೆ ಹಾಗೂ ಜಿಹಾದಿಗಳಿಗೆ ಬೆಂಬಲ ನೀಡಿದಂತಾಗಿದೆ ಎಂದು ಆಪಾದಿಸಿದ್ದಾರೆ.
ಭಾರತ ಹಾಗೂ ಅಮೆರಿಕ ಸುಧಾರಣೆಗೆ ಇದರಿಂದ ತೊಡಕಾಗಲೂಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಕಳೆದ 50ವರ್ಷಗಳಿಂದ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿನ ಆಗುಹೋಗುಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವ ವಿಲ್ಸನ್ ಅವರ ಅಭಿಪ್ರಾಯ ಇದೀಗ ಮಹತ್ವ ಪಡೆದುಕೊಂಡಿದೆ. |