ತಮಿಳು ಬಂಡುಕೋರರು ಮತ್ತು ಶ್ರೀಲಂಕಾ ಸೇನೆಯ ನಡುವೆ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಎಲ್‌ಟಿಟಿಇ ನಿಯಂತ್ರಣವಿರುವ ವಾಯುನೆಲೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಇದೀಗ ಒಂದೊಂದಾಗಿ ಸೇನೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆ.
ಇದರ ಮುಂದುವರಿದ ಅಂಗವಾಗಿ ಈರ್ನಮಡುವಿನಲ್ಲಿ ಇರುವ ಎಲ್‌ಟಿಟಿಇ ವಾಯು ಪಡೆ ಶ್ರೀಲಂಕಾ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿತ್ತು. ರಾಜಧಾನಿ ಕೊಲೊಂಬೋದ ಮೇಲೆಯೂ ಇಂತಹ ದಾಳಿಗಳು ನಡೆದಿದೆ.
ಕಿಲಿನೊಚ್ಚಿಯಿಂದ ಕೆಲವೇ ಕಿ.ಮೀ.ದೂರದಲ್ಲಿರುವ ಈರ್ನಮಡು ಮೇಲೆ ಶ್ರೀಲಂಕಾ ಯೋಧರು ಹಿಡಿತ ಸಾಧಿಸುವಷ್ಟರಲ್ಲಿ ಎಲ್‌ಟಿಟಿಇ ಬಂಡುಕೋರರು ಚೆಕ್ ರಾಷ್ಟ್ರ ನಿರ್ಮಿತ ವಿಮಾನಗಳನ್ನು ಬೇರೆಡೆ ಸ್ಥಳಾಂತರಿಸಿರುವುದಾಗಿ ಸೇನಾ ಮೂಲಗಲು ತಿಳಿಸಿವೆ.
ಕಳೆದ ಕೆಲವು ತಿಂಗಳಿನಿಲ್ಲಿ 4073 ತಮಿಳು ಬಂಡುಕೋರರನ್ನು ಹತ್ಯೆ ಮಾಡಿರುವುದಾಗಿ ಹೇಳಿದೆ. ಈ ಕದನದಲ್ಲಿ 3,447 ಯೋಧರನ್ನು ಕಳೆದುಕೊಂಡಿರುವುದಾಗಿ ವಿವರಿಸಿದೆ. |