ಗಾಜಾ ವಿರುದ್ಧ ಇಸ್ರೇಲ್ ಸೇನಾಪಡೆ ನಡೆಸುತ್ತಿರುವ ದಾಳಿ ವಿರುದ್ಧದ ನಿಲುವನ್ನು ವ್ಯಕ್ತಪಡಿಸಿದ ವೆನಿಜುವೆಲಾ ಇಸ್ರೇಲ್ ರಾಯಭಾರಿಯನ್ನು ವಜಾಗೊಳಿಸಿದೆ.
ಗಾಜಾದ ವಿರುದ್ಧ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ವೆನಿಜುವೆಲಾ ಅಧ್ಯಕ್ಷರಾದ ಹ್ಯೂಗೋ ಚಾವೆಜ್ ತೀವ್ರವಾಗಿ ಖಂಡಿಸಿದ್ದಾರೆ. ಇಸ್ರೇಲ್ ನಡೆಸುತ್ತಿರುವ ಸೇನಾ ಮತ್ತು ವೈಮಾನಿಕ ಆಕ್ರಮಣದಲ್ಲಿ 600ರಷ್ಟು ಪಾಲೆಸ್ತೇನ್ ಪ್ರಜೆಗಳು ಬಲಿಯಾಗಿದ್ದಾರೆ.
ಇಸ್ರೇಲ್‌ನ ದಕ್ಷಿಣ ಭಾಗ ಪ್ರದೇಶಕ್ಕೆ ಪಾಲೆಸ್ತೇನ್ ತೀವ್ರವಾದಿಗಳು ನಡೆಸುತ್ತಿರುವ ಆಕ್ರಮಣವನ್ನು ತಡೆಯುವ ಭಾಗವಾಗಿ ಡಿಸೆಂಬರ್ 27ರಂದು ಇಸ್ರೇಲ್ ತನ್ನ ಪ್ರತಿದಾಳಿಯನ್ನು ಆರಂಭಿಸಿತ್ತು. |