ಶ್ರೀಲಂಕಾ ಸೇನೆ ವಶಪಡಿಸಿಕೊಂಡಿರುವ ಎಲ್‌ಟಿಟಿಇಯ ಅಘೋಷಿತ ರಾಜಧಾನಿಯಾಗಿರುವ ಕಿಲಿನೊಚ್ಚಿಯನ್ನು ವಶಪಡಿಸಿಕೊಂಡಿದ್ದರೂ ಕೂಡ, ಮತ್ತೆ ಅದನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವುದಾಗಿ ತಮಿಳು ಟೈಗರ್ಸ್ ಮೂಲಗಳು ತಿಳಿಸಿವೆ.
ತಮಿಳು ಬಂಡುಕೋರರ ಕಾರಸ್ಥಾನವಾಗಿರುವ ಕಿಲಿನೊಚ್ಚಿಯನ್ನು ಸೇನಾ ವಶಕ್ಕೆ ತೆಗೆದುಕೊಂಡ ನಂತರ ಲಂಕಾ ಸರ್ಕಾರ ಅಲ್ಲಿ ಚುನಾವಣೆಯನ್ನು ನಡೆಸುವ ಯೋಜನೆ ಹಾಕಿಕೊಂಡಿರುವುದಾಗಿ ಎಲ್‌ಟಿಟಿಇ ಹೇಳಿದೆ.
ಎಲ್‌ಟಿಟಿಇಯ ಪ್ರಮುಖ ನೆಲೆಯಾಗಿರುವ ಕಿಲಿನೊಚ್ಚಿ ಕೈ ತಪ್ಪುವ ಮೂಲಕ ತಮಿಳು ಬಂಡುಕೋರರಿಗೆ ತೀವ್ರ ಹಿನ್ನೆಡೆಯಾಗಿದ್ದರೂ ಸಹ, ಶ್ರೀಲಂಕಾ ಸೇನೆಯಿಂದ ಮತ್ತೆ ತಮ್ಮ ಕೈವಶ ಮಾಡಿಕೊಳ್ಳುವುದಾಗಿ ಎಲ್‌ಟಿಟಿಇಯ ರಾಜಕೀಯ ವರಿಷ್ಠ ಬಿ.ನಾದೇಸಾನ್ ಆಶಾಭಾವ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ನಾವು ಈ ಮೊದಲೇ ಕೆಲವು ನಗರಗಳನ್ನು ತಮ್ಮ ಕೈವಶ ಮಾಡಿಕೊಂಡಿದ್ದು, ಈಗಾಗಲೇ ಅಲ್ಲೆಲ್ಲ ತಮ್ಮ ಹತೋಟಿ ಹೊಂದಿರುವುದಾಗಿ ಅವರು ಹೇಳಿದರು.
|