ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹೌದು,ಕಸಬ್ ನಮ್ಮ ದೇಶದವನೇ: ಪಾಕಿಸ್ತಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೌದು,ಕಸಬ್ ನಮ್ಮ ದೇಶದವನೇ: ಪಾಕಿಸ್ತಾನ
ಕೊನೆಗೂ ಒಪ್ಪಿಕೊಂಡ ಪಾಕ್...
ಮುಂಬೈ ದಾಳಿಯಲ್ಲಿ ಜೀವಂತವಾಗಿ ಸೆರೆ ಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ನಮ್ಮ ದೇಶದವನೇ ಎಂದು ಕೊನೆಗೂ ಪಾಕ್ ಒಪ್ಪಿಕೊಂಡಿರುವುದಾಗಿ ಪಾಕ್ ಮಾಧ್ಯಮ ವರದಿಗಳು ತಿಳಿಸಿವೆ.

ಅಜ್ಮಲ್ ಕಸಬ್ ಫರೀದ್ ಕೋಟ್‍‍ನ ನಿವಾಸಿಯಾಗಿದ್ದು, ಆತ ನಮ್ಮ ದೇಶದ ಪ್ರಜೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪಾಕ್ ತಿಳಿಸಿರುವುದಾಗಿ ಹೇಳಿದೆ.

ಆದರೆ ಈ ಹೇಳಿಕೆ ಕುರಿತು ಸರ್ಕಾರದ ಯಾವುದೇ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ. ಕಸಬ್ ಕುರಿತು ಪಾಕಿಸ್ತಾನ ಸ್ವತಃ ತನಿಖೆ ಕೈಗೊಂಡಿದ್ದು, ಪ್ರಾಥಮಿಕ ಅಂಶದಿಂದ ಆತ ನಮ್ಮ ದೇಶದವನೇ ಎಂದು ತಿಳಿದು ಬಂದಿರುವುದಾಗಿ ತಿಳಿಸಿದೆ.

ಮುಂಬೈಯ ದಾಳಿಯ ಬಳಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡ ಭಾವಚಿತ್ರ ಹಾಗೂ ಪಾಕ್‌ನ ಡಾನ್ ಪತ್ರಿಕೆಗೆ ಸ್ವತಃ ಕಸಬ್ ತಂದೆಯೇ ಆತ ತನ್ನ ಮಗ ಎಂದು ಖಚಿತಪಡಿಸಿದ್ದರು.

ಅಲ್ಲದೇ ಮುಂಬೈ ದಾಳಿಗೆ ಆರು ತಿಂಗಳ ಮುನ್ನ ಕಸಬ್ ಕೊನೆಯ ಬಾರಿಗೆ ಫರೀದ್‌ಕೋಟ್‌‌ನಲ್ಲಿರುವ ಮನೆಗೆ ಭೇಟಿ ನೀಡಿ, ತಾನು ಜಿಹಾದ್‌‌ಗೆ ತೆರಳುತ್ತಿರುವುದಾಗಿ ತಾಯಿಗೆ ತಿಳಿಸಿರುವುದಾಗಿ ಸ್ಥಳೀಯ ನಿವಾಸಿಗಳು ಜಿಯೋ ನ್ಯೂಸ್ ಚಾನೆಲ್‌‌ಗೆ ತಿಳಿಸಿದ್ದರು.

ಇದೀಗ ಅಜ್ಮಲ್ ಕಸಬ್ ನಮ್ಮ ದೇಶದ ಪ್ರಜೆಯೇ ಎಂಬುದಾಗಿ ಪಾಕ್ ಸರ್ಕಾರ ತಿಳಿಸಿರುವುದಾಗಿ ಡಾನ್ ನ್ಯೂಸ್ ವರದಿ ಹೇಳಿರುವುದಾಗಿ ವಿವರಿಸಿದೆ. ವಾಣಿಜ್ಯ ನಗರಿ ಮುಂಬೈ ದಾಳಿಯಲ್ಲಿ ಸೆರೆಸಿಕ್ಕ ಅಜ್ಮಲ್ ಕುರಿತು ಭಾರತ ಸಾಕಷ್ಟು ಪುರಾವೆಗಳನ್ನು ಒದಗಿಸಿದರೂ ಕೂಡ ಪಾಕ್ ದಿನಕ್ಕೊಂದು ರಾಗ ಬದಲಿಸುವ ಮೂಲಕ ಇಬ್ಬಗೆ ನೀತಿಯನ್ನು ಅನುಸರಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಸನಿಹಕ್ಕೇ ಬಂದಿದೆ ತಾಲಿಬಾನೀಕರಣ
ಕಿಲಿನೊಚ್ಚಿಯನ್ನು ಮತ್ತೆ ಕೈವಶ ಮಾಡಿಕೊಳ್ಳುತ್ತೇವೆ: ಎಲ್‌ಟಿಟಿಇ
ಬಾನ್ ಇಸ್ರೇಲ್‌ ಭೇಟಿ ಸಾಧ್ಯತೆ
ಭಾರತ ವಿರುದ್ಧ ಕದನವಿಲ್ಲ: ಐಎಸ್‌ಐ ಚೀಫ್
ಭಾರತದ ಪುರಾವೆ ಬಗ್ಗೆಯೇ ತನಿಖೆ: ಪಾಕ್
ವೆನಿಜುವೆಲಾ: ಇಸ್ರೇಲ್ ರಾಯಭಾರಿಯ ವಜಾ