ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇಸ್ರೇಲ್ ಮೇಲೆ ಲೆಬನಾನ್ ರಾಕೆಟ್ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಸ್ರೇಲ್ ಮೇಲೆ ಲೆಬನಾನ್ ರಾಕೆಟ್ ದಾಳಿ
ಉತ್ತರ ಇಸ್ರೇಲ್ ಭಾಗದ ಮೇಲೆ ಗುರುವಾರ ಬೆಳಿಗ್ಗೆ ಲೆಬನಾನ್ ಉಗ್ರರು ಮೂರು ರಾಕೆಟ್ ದಾಳಿ ನಡೆಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವಿನ ಕುರಿತು ತಿಳಿದುಬಂದಿಲ್ಲ.

ಆದರೆ ಈ ದಾಳಿಯ ಹೊಣೆಯನ್ನು ಈವರೆಗೂ ಯಾವುದೇ ಲೆಬನಾನ್ ಉಗ್ರಗಾಮಿ ಸಂಘಟನೆಗಳು ಹೊತ್ತುಕೊಂಡಿಲ್ಲ. ಏತನ್ಮಧ್ಯೆ ರಾಕೆಟ್ ದಾಳಿಯ ಹಿಂದೆ ಹಿಜ್ಬುಲ್ಲಾ ಇದ್ದಿರುವುದಾಗಿ ಇಸ್ರೇಲ್ ರಕ್ಷಣಾ ವಕ್ತಾರ ಶಂಕೆ ವ್ಯಕ್ತಪಡಿಸಿದ್ದಾರೆ.

ಕಳೆದ 13ದಿನಗಳಿಂದ ಇಸ್ರೇಲ್ ಗಾಜಾಪಟ್ಟಿಯ ವಿರುದ್ಧ ನಡೆಸುತ್ತಿರುವ ದಾಳಿಯನ್ನು ಮುಂದುವರಿಸಿದ್ದು, ಒಟ್ಟು 600ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಗಾಜಾ ಮೇಲಿನ ಇಸ್ರೇಲ್ ದಾಳಿ ಬಗ್ಗೆ ಅರಬ್ ದೇಶಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಹಮಸ್ ಉಗ್ರರ ನಡುವಿನ ಘರ್ಷಣೆಯನ್ನು ಶೀಘ್ರವೇ ಕೊನೆಗೊಳಿಸಿ,ದಾಳಿಯನ್ನು ನಿಲ್ಲಿಸಬೇಕು ಎಂಬ ಈಜಿಪ್ಟ ಹಾಗೂ ಫ್ರಾನ್ಸ್ ದೇಶಗಳ ಮನವಿಯನ್ನು ಇಸ್ರೇಲ್ ಒಪ್ಪಿಕೊಂಡಿರುವುದಾಗಿ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೆನಡಾ: ಹತ್ಯೆ ಪ್ರಕರಣದಲ್ಲಿ ಭಾರತೀಯ ಸೆರೆ
ಭಾರತದ ಪುರಾವೆ ನಂಬಲರ್ಹ: ಅಮೆರಿಕಾ
ನೇಪಾಳ: ಭಾರತೀಯ ಅರ್ಚಕರ ಮರುನೇಮಕ
ನೇಪಾಳ: ದೇವಾಲಯದ ಆದಾಯದ ಮೇಲೆ ಮಾವೋಗಳ ಕಣ್ಣು
ಪಾಕ್ ಭದ್ರತಾ ಸಲಹೆಗಾರ ದುರಾನಿ ತಲೆದಂಡ
ಹೌದು,ಕಸಬ್ ನಮ್ಮ ದೇಶದವನೇ: ಪಾಕಿಸ್ತಾನ