ಜಿಂಬಾಬ್ವೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಇದುವರೆಗೆ ಕನಿಷ್ಠ ಪಕ್ಷ 1,778 ಮಂದಿ ಮಾರಾಣಾಂತಿಕವಾಗಿ ಹರಡಿದ ಕಾಲರಾ ರೋಗಕ್ಕೆ ಬಲಿಯಾಗಿದ್ದು, ಸುಮಾರು 35,931 ಮಂದಿಗೆ ರೋಗ ಲಕ್ಷ್ಮಣ ಕಂಡುಬಂದಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ತಿಳಿಸಿವೆ. ಜಿಂಬಾಬ್ವೆಯ ಹತ್ತು ಪ್ರಾಂತ್ಯಗಳಲ್ಲಿ ಕಾಲರಾ ರೋಗವು ಸಂಪೂರ್ಣವಾಗಿ ಭಾದಿಸಿದೆಯೆಂದು ವಿಶ್ವ ಸಂಸ್ಥೆಯ ಲೆಕ್ಕಾಚಾರವು ತಿಳಿಸುತ್ತದೆ. |