ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತ ನೀಡಿರುವ ಪುರಾವೆ ಬಗ್ಗೆ ನಾವು ಸ್ವತಃ ತನಿಖೆ ನಡೆಸುತ್ತಿದ್ದೇವೆ. ಆದರೆ ಆ ಘಟನೆಯಲ್ಲಿ ಯಾವೊಬ್ಬ ಪಾಕ್ ಪ್ರಜೆ ಭಾಗಿಯಾಗಿಲ್ಲ. ಅಲ್ಲದೇ ಯಾವುದೇ ಪ್ರಜೆಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಭಾರತ ನೀಡಿರುವ ಪುರಾವೆ ಕುರಿತು ನಾವೇ ತನಿಖೆ ನಡೆಸುತ್ತಿದ್ದು, ಅದು ಮುಕ್ತಾಯ ಕಂಡ ನಂತರ ಆರೋಪಿತರನ್ನು ಪತ್ತೆ ಹಚ್ಚುವುದಾಗಿ ಹೇಳಿರುವ ಗಿಲಾನಿ, ಪುರಾವೆಯನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ನಾವು ನಮ್ಮದೇ ಕಾನೂನಿನ್ವಯ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ನಾವು ಪಾಕ್ ನೆಲದಲ್ಲಿ ಭಯೋತ್ಪಾದನೆಗೆ ಯಾವುದೇ ಅವಕಾಶ ನೀಡಲಾರೆವು ಎಂಬುದಾಗಿ ಭರವಸೆ ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಒಂದು ವೇಳೆ ಮುಂಬೈ ದಾಳಿಯಲ್ಲಿ ಪಾಕ್ ಪ್ರಜೆ ಶಾಮೀಲಾಗಿದ್ದೇ ಹೌದದಾರೆ, ನಾವು ಆರೋಪಿಗಳನ್ನು ಯಾವುದೇ ದೇಶಕ್ಕೂ ಹಸ್ತಾಂತರಿಸಲಾರೆವು ಎಂದು ಸ್ಪಷ್ಟಪಡಿಸಿದ್ದಾರೆ. |