ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿ ಪ್ರಪಂಚದ ಇತರ ದೇಶಗಳಲ್ಲೂ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ ಕೈದಾದಂತಹ ಉಗ್ರಗಾಮಿ ಸಂಘಟನೆಯನ್ನು ಮಟ್ಟ ಹಾಕುವುದೇ ತಮ್ಮ ಆಡಳಿತದ ಪ್ರಮುಖ ಗುರಿಯಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಭಾನುವಾರ ಎಬಿಸಿ ನಡೆಸಿದ ಸಂದರ್ಶನದಲ್ಲಿ,ಮುಂಬೈ ದಾಳಿ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಬರಾಕ್, ಮುಂಬೈ ಮಾದರಿಯಂತಹ ದಾಳಿ ಅಮೆರಿಕದಲ್ಲೂ ನಡೆಯುವ ಸಾಧ್ಯತೆ ಇರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದರು.
ಮುಂಬೈ ದಾಳಿಯಲ್ಲಿ ಏನಾಯಿತು ಎಂಬುದನ್ನು ನಾವೆಲ್ಲ ಗಮನಿಸಿದ್ದೇವೆ. ಹೊಸ ತಂತ್ರಗಾರಿಕೆಯನ್ನು ಬಳಸುವ ಮೂಲಕ ಭಯೋತ್ಪಾದನೆಯನ್ನು ಆರಂಭಿಸಿದ್ದಾರೆ. ಇದು ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವಂಹದ್ದು ಮಾತ್ರವಲ್ಲ ಇಡೀ ಜಗತ್ತಿಗೆ ಸವಾಲೊಡ್ಡುವಂತಾದ್ದಾಗಿದೆ ಎಂದು ಹೇಳಿದರು. |