ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಯೆಮೆನ್ ವಿಮಾನದ ಕಪ್ಪುಪೆಟ್ಟಿಗೆಯಿಂದ ಸಂಕೇತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯೆಮೆನ್ ವಿಮಾನದ ಕಪ್ಪುಪೆಟ್ಟಿಗೆಯಿಂದ ಸಂಕೇತ
ಹಿಂದುಮಹಾಸಾಗರದಲ್ಲಿ ಅಪಘಾತಕ್ಕೀಡಾದ ಯೆಮೆನಿ ವಿಮಾನದ ಕಪ್ಪು ಪೆಟ್ಟಿಗೆಯ ಹಾರಾಟ ಧ್ವನಿಮುದ್ರಿಕೆಯ ಸಂಕೇತವನ್ನು ಪತ್ತೆಹಚ್ಚಿರುವುದಾಗಿ ಫ್ರೆಂಚ್ ಅಧಿಕಾರಿ ತಿಳಿಸಿದ್ದಾರೆ. ಧ್ವನಿಮುದ್ರಿಕೆಯನ್ನು ಹೊರತೆಗೆಯುವ ಕೆಲಸ ಆರಂಭವಾಗಲಿದೆಯೆಂದು ಅಧಿಕಾರಿ ಹೇಳಿದರು.

ಕೆಟ್ಟ ಹವೆಯಿಂದಾಗಿ 153 ಮಂದಿ ಪ್ರಯಾಣಿಕರಿದ್ದ ವಿಮಾನವು ಅಪಘಾತಕ್ಕೀಡಾಗಿತ್ತು. 14 ವರ್ಷದ ಬಾಲಕಿ ಮಾತ್ರ ಬದುಕುಳಿದಿದ್ದಾಗಿ ವರದಿಯಾಗಿತ್ತು. ವಿಮಾನದಲ್ಲಿ ಸುಮಾರು 66 ಮಂದಿ ಫ್ರೆಂಚ್ ಪೌರರಿದ್ದು, ಯೆಮೆನಿ ರಾಜಧಾನಿ ಸಾನಾದಿಂದ ಕೊಮೊರಾಸ್ ಕಡೆ ವಿಮಾನ ತೆರಳುತ್ತಿತ್ತು. ಕಪ್ಪುಪೆಟ್ಟಿಗೆಯ ಸಂಕೇತವನ್ನು ಮಂಗಳವಾರ ಸ್ಥಳೀಯ ಕಾಲಮಾನ 4.30ಕ್ಕೆ ವೈಮಾನಿಕ ಗಸ್ತುಪಡೆ ಗ್ರಾಂಡೆ ಕೊಮೋರ್‌ನಿಂದ 40 ಕಿಮೀ ದೂರದಲ್ಲಿ ಗುರುತಿಸಿದೆ.

ಪತ್ತೆ ಕಾರ್ಯಾಚರಣೆಗೆ ಫ್ರೆಂಚ್ ನೌಕೆಯೊಂದನ್ನು ಕಳಿಸಲಾಗಿದೆಯೆಂದು ವಕ್ತಾರೆ ಹೇಳಿದ್ದಾರೆ.ಇತ್ತೀಚಿನ ವಾರಗಳಲ್ಲಿ ಏರ್‌ಬಸ್ ವಿಮಾನ ಒಳಗೊಂಡ ಎರಡನೇ ಅಪಘಾತ ಇದಾಗಿದ್ದು, ಕಳೆದ ಜೂನ್ 1ರಂದು ರಿಯೊ ಡಿ ಜನೆರೊದಿಂದ ಪ್ಯಾರಿಸ್‌ಗೆ ತೆರಳುತ್ತಿದ್ದ ಏರ್ ಫ್ರಾನ್ಸ್ ವಿಮಾನ ಅಟ್ಲಾಂಟಿಕ್ ಸಾಗರದಲ್ಲಿ ಪತನವಾಗಿ 228 ಜನರು ಬಲಿಯಾಗಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬುರ್ಖಾ ವಿರೋಧಿಸಿದ ಫ್ರಾನ್ಸ್ ವಿರುದ್ಧ ಪ್ರತೀಕಾರಕ್ಕೆ ಕರೆ
ನಿದ್ರೆಬರಿಸುವ ಔಷಧಕ್ಕಾಗಿ ಒತ್ತಾಯಿಸಿದ್ದ ಜಾಕ್ಸನ್
ಯೆಮೆನ್ ವಿಮಾನ ಅಪಘಾತದಲ್ಲಿ ಬದುಕುಳಿದ ಮತ್ತೊಬ್ಬ ಬಾಲಕಿ
ಅಮೆರಿಕದಲ್ಲಿ ಗಾಂಧೀಜಿಯ ಜನ್ಮದಿನ ಸ್ಮರಣೆಗೆ ನಿರ್ಣಯ
ಚೀನಾದಲ್ಲಿ ಮಧ್ಯಮ ಪ್ರಮಾಣದ ಭೂಕಂಪ
ಇಟೆಲಿ: ರೈಲು ಹಳಿತಪ್ಪಿ 13 ಸಾವು