ಡೆಟ್ರಾಯಿಟ್ ಶಾಲೆಯ ಬಳಿಯ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಅಪ್ರಾಪ್ತ ವಯಸ್ಕ ಶಾಲಾ ಮಕ್ಕಳ ಮೇಲೆ ಹಸಿರು ಮಿನಿವ್ಯಾನ್‌ನಲ್ಲಿ ಆಗಮಿಸಿದ ಬಂದೂಕುಧಾರಿಗಳು ಗುಂಡು ಹಾರಿಸಿದ್ದರಿಂದ ಏಳು ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಇಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೋಡಿ 9ನೇ ಗ್ರೇಡ್ ಅಕಾಡೆಮಿಯಲ್ಲಿ ಬೇಸಿಗೆ ತರಗತಿಗಳಿಗೆ ಹಾಜರಾದ ಮಕ್ಕಳು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಹಸಿರು ಮಿನಿವ್ಯಾನ್‌ನಿಂದ ಹೊರಬಂದ ಇಬ್ಬರು ಬಂದೂಕುಧಾರಿಗಳು ವ್ಯಕ್ತಿಯೊಬ್ಬನನ್ನು ಕೇಳಿದ ಬಳಿಕ ಗುಂಡಿನ ಮಳೆಗರೆದರೆಂದು ಡೆಟ್ರಾಯಿಟ್ ಪೊಲೀಸ್ ವಕ್ತಾರ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಹೆಸರು ಮತ್ತು ವಯಸ್ಸನ್ನು ತಕ್ಷಣಕ್ಕೆ ಬಿಡುಗಡೆ ಮಾಡಲಾಗಿಲ್ಲ. |