ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್‌ಗೆ ನೆರವಿನಿಂದ ಕಳವಳ ಪಡಬೇಡಿ: ಬ್ಲೇಕ್ ಭರವಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ಗೆ ನೆರವಿನಿಂದ ಕಳವಳ ಪಡಬೇಡಿ: ಬ್ಲೇಕ್ ಭರವಸೆ
ಪಾಕಿಸ್ತಾನಕ್ಕೆ ಹೆಚ್ಚುವರಿ ನೆರವನ್ನು ತಾವು ನೀಡುತ್ತಿರುವ ಬಗ್ಗೆ ಭಾರತ ಕಳವಳಪಡುವ ಅಗತ್ಯವಿಲ್ಲವೆಂದು ಅಮೆರಿಕ ತಿಳಿಸಿದೆ. ಪಾಕಿಸ್ತಾನ ಈ ನೆರವನ್ನು ತನ್ನ ಮಿಲಿಟರಿ ಬಲಪಡಿಸಲು ಬಳಸುತ್ತದೆಂಬ ಶಂಕೆಗಳನ್ನು ತೊಡೆದುಹಾಕುವಂತೆ ಅದು ತಿಳಿಸಿದೆ.

ಪಾಕಿಸ್ತಾನದ ಜತೆ ನಮ್ಮ ಬಾಂಧವ್ಯಕ್ಕೆ ಸಂಬಂಧಪಟ್ಟಂತೆ ಪಾಕ್‌ಗೆ ಕ್ರಮೇಣ ನೆರವು ಹೆಚ್ಚಿಸಿ ಅದರ ಆರ್ಥಿಕ ಸವಾಲುಗಳು ನಿವಾರಣೆಗೆ ಮತ್ತು ಅಧಿಕಾರವನ್ನು ಎಲ್ಲ ಭಾಗಗಳಿಗೂ ವಿಸ್ತರಿಸಲು ನೆರವಾಗಲು ನಾವು ಗಮನಹರಿಸುತ್ತೇವೆ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿದೇಶಾಂಗ ಸಹಾಯಕ ಕಾರ್ಯದರ್ಶಿ ರಾಬರ್ಟ್ ಬ್ಲೇಕ್ ತಿಳಿಸಿದ್ದಾರೆ.

ಅಮೆರಿಕದ ನೆರವನ್ನು ಭಾರತದ ವಿರುದ್ಧ ಮಿಲಿಟರಿ ಬಲವರ್ಧನೆಗೆ ಪಾಕಿಸ್ತಾನ ಬಳಸುತ್ತದೆಂಬ ಭಾರತದ ಆತಂಕವನ್ನು ಅವರು ತಳ್ಳಿಹಾಕಿ, ಸ್ವಂತ ರಾಷ್ಟ್ರದಲ್ಲೇ ಉಗ್ರವಾದಿ ಸಮಸ್ಯೆಗಳನ್ನು ನಿಭಾಯಿಸಲು ಪಾಕಿಸ್ತಾನ ಗಮನಹರಿಸಿದೆಯೆಂದು ತಿಳಿಸಿದರು.

ಅಮೆರಿಕಕ್ಕೆ ಉಗ್ರಗಾಮಿ ಪೀಡಿತ ಪಾಕಿಸ್ತಾನ ಮತ್ತು ಆಪ್ಘಾನಿಸ್ತಾನ ಆಯಕಟ್ಟಿನ ಆದ್ಯತೆಯೆಂದು ಪರಿಗಣಿಸಿದ ಅವರು, ಈ ವಲಯದ ಗುರಿಗಳ ಈಡೇರಿಕೆಗೆ ಭಾರತದ ಜತೆ ಸಾಮೀಪ್ಯದ ಭೇಟಿಯನ್ನು ಅಮೆರಿಕ ಬಯಸುತ್ತದೆಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡೆಟ್ರಾಯಿಟ್ ಶಾಲೆ ಬಳಿ 7 ಬಾಲಕರಿಗೆ ಗುಂಡೇಟು
ಬೇನಜಿರ್ ಹತ್ಯೆಯ ತನಿಖೆಗೆ ಚಿಲಿ ರಾಯಭಾರಿ ನೇತೃತ್ವ
ಯೆಮೆನ್ ವಿಮಾನದ ಕಪ್ಪುಪೆಟ್ಟಿಗೆಯಿಂದ ಸಂಕೇತ
ಬುರ್ಖಾ ವಿರೋಧಿಸಿದ ಫ್ರಾನ್ಸ್ ವಿರುದ್ಧ ಪ್ರತೀಕಾರಕ್ಕೆ ಕರೆ
ನಿದ್ರೆಬರಿಸುವ ಔಷಧಕ್ಕಾಗಿ ಒತ್ತಾಯಿಸಿದ್ದ ಜಾಕ್ಸನ್
ಯೆಮೆನ್ ವಿಮಾನ ಅಪಘಾತದಲ್ಲಿ ಬದುಕುಳಿದ ಮತ್ತೊಬ್ಬ ಬಾಲಕಿ