ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಆಸ್ಕರ್ ವಿಜೇತ ನಟ ಕಾರ್ಲ್ ಮಾಲ್ಡೆನ್ ನಿಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಸ್ಕರ್ ವಿಜೇತ ನಟ ಕಾರ್ಲ್ ಮಾಲ್ಡೆನ್ ನಿಧನ
ಅಕಾಡೆಮಿ ಪ್ರಶಸ್ತಿ ವಿಜೇತ ನಟನಾಗಿ ವೇದಿಕೆ, ತೆರೆ ಮತ್ತು ಟೆಲಿವಿಷನ್‌ನಲ್ಲಿ ಸಾಮಾನ್ಯ ರೂಪದ ನಡುವೆಯ‌ೂ ಬುದ್ಧಿವಂತ ಪಾತ್ರಗಳಿಂದ ತಾರೆಯಾದ ಕಾರ್ಲ್ ಮಾಲ್ಡೆನ್ ತಮ್ಮ 97 ವರ್ಷ ವಯಸ್ಸಿಗೆ ನಿಧನರಾಗಿದ್ದಾರೆ. ಬ್ರೆಂಟ್‌ವುಡ್ ಮನೆಯಲ್ಲಿ ತಮ್ಮ ಕುಟುಂಬದ ಸಮ್ಮುಖದಲ್ಲಿ ಮಾಲ್ಡೆನ್ ಸಹಜ ಕಾರಣಗಳಿಂದ ಸತ್ತಿದ್ದಾರೆಂದು ಮೋಷನ್ ಪಿಕ್ಚರ್ ಅಕಾಡೆಮಿಗೆ ಅವರ ಕುಟುಂಬ ತಿಳಿಸಿದೆ.

1989-92ರ ನಡುವೆ ಅವರು ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.ಅನೇಕ ಪಾತ್ರಗಳನ್ನು ನಿಭಾಯಿಸಿರುವ ಅವರು, ಮಿಲಿಟರಿ ಸಮವಸ್ತ್ರ ಮತ್ತು ಕಾರ್ಮಿಕರ ಉಡುಪಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ಕೆಚ್ಚೆದೆಯ ಪಾತ್ರಗಳಲ್ಲಿ ನೈಜತೆ ಅವರಿಗೆ ಸಹಜವಾಗಿ ಬಂದಿದ್ದು, ಝೆಕ್ ತಾಯಿ ಮತ್ತು ಸರ್ಬಿಯನ್ ತಂದೆಯ ಪುತ್ರರಾಗಿದ್ದ ಅವರು, ಕಾಲೇಜಿನ ಶಿಕ್ಷಣ ಅರ್ಧಕ್ಕೆ ತ್ಯಜಿಸಿದ ಬಳಿಕ ಇಂಡಿಯಾನ ಗ್ಯಾರಿಯ ಉಕ್ಕಿನ ಕಾರ್ಖಾನೆಯಲ್ಲಿ ದುಡಿದಿದ್ದರು.

ಮಾಲ್ಡೆನ್ 1951ರಲ್ಲಿ 'ಎ ಸ್ಟ್ರೀಟ್ ಕಾರ್ ನೇಮಡ್ ಡಿಸೈರ್‌'ನಲ್ಲಿ ಸಹನಟನ ಪಾತ್ರದ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ ವಿಜೇತರಾಗಿದ್ದರು. 1954ರಲ್ಲಿ 'ಆನ್ ದಿ ವಾಟರ್‌ಫ್ರಂಟ್' ಚಿತ್ರದಲ್ಲಿ ನಿರ್ಭಯ, ಕಾರ್ಮಿಕರ ಸ್ನೇಹಿತನಾದ ಫಾದರ್ ಕಾರಿಗನ್ ಅಭಿನಯಕ್ಕೆ ಅವರಿಗೆ ಅತ್ಯುತ್ತಮ ಸಹನಟನೆಂದು ಆಸ್ಕರ್ ಪ್ರಶಸ್ತಿಗೆ ಪುರಸ್ಕೃತರಾದರು. ಎರಡೂ ಚಿತ್ರಗಳಲ್ಲಿ ಮಾರ್ಲನ್ ಬ್ರಾಂಡೊ ಜತೆ ಅವರು ಅಭಿನಯಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತೀಯ ಕೈದಿಗಳ ಪಟ್ಟಿ ಪಾಕ್‌ನಿಂದ ಹಸ್ತಾಂತರ
ತಾಲಿಬಾನ್ ಕಮಾಂಡರ್ ಫಜಲುಲ್ಲಾಗೆ ಗಾಯ
ಕತಾರ್‌ನಲ್ಲಿ ದೋಣಿ ದುರಂತ: 30 ಸಾವು?
ಆಸ್ಟ್ರೇಲಯಾಕ್ಕೆ ಭೇಟಿ ನೀಡಲಿರುವ ಕೃಷ್ಣ
ಪಾಕ್‌ಗೆ ನೆರವಿನಿಂದ ಕಳವಳ ಪಡಬೇಡಿ: ಬ್ಲೇಕ್ ಭರವಸೆ
ಡೆಟ್ರಾಯಿಟ್ ಶಾಲೆ ಬಳಿ 7 ಬಾಲಕರಿಗೆ ಗುಂಡೇಟು