ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ರಾವಲ್ಪಿಂಡಿಯಲ್ಲಿ ಬಾಂಬ್ ಸ್ಫೋಟಕ್ಕೆ 6 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾವಲ್ಪಿಂಡಿಯಲ್ಲಿ ಬಾಂಬ್ ಸ್ಫೋಟಕ್ಕೆ 6 ಬಲಿ
ಅಗ್ನಿಕುಂಡವಾಗಿರುವ ಪಾಕಿಸ್ತಾನದಲ್ಲಿ ಸರ್ಕಾರಿ ಇಲಾಖೆಯ ಸಿಬ್ಬಂದಿಯನ್ನು ಒಯ್ಯುತ್ತಿರುವ ಬಸ್‌ವೊಂದಕ್ಕೆ ಗುರುವಾರ ಮೋಟರ್‌ಸೈಕಲ್‌ನಲ್ಲಿ ಆಗಮಿಸಿದ ಆತ್ಮಾಹುತಿ ಬಾಂಬರ್ ಅಪ್ಪಳಿಸಿ ಸ್ಫೋಟಿಸಿದ್ದರಿಂದ 6 ಮಂದಿ ಹತರಾಗಿದ್ದಾರೆ ಮತ್ತು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಫೋಟವು ಅನೇಕ ವಾಹನಗಳನ್ನು ಚೂರುಚೂರು ಮಾಡಿತು. ಬಾರೀ ಆಸ್ಫೋಟದೊಂದಿಗೆ ಸದ್ದು ಮಾಡಿ 6 ಮಂದಿ ಸತ್ತಿದ್ದಾರೆಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರಾವಲ್ಪಿಂಡಿಯ ಚೂರ್ ಚೌಕ್‌ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆಯೆಂದು ನಾವು ಕರೆಯೊಂದನ್ನು ಸ್ವೀಕರಿಸಿದ್ದರಿಂದ ಆಂಬ್ಯುಲೆನ್ಸ್‌ಗಳನ್ನು ಕಳಿಸಿದೆವು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದವು. ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ಪ್ರಭಾವಶಾಲಿ ಮಿಲಿಟರಿ ಮುಖ್ಯಕಚೇರಿಯಿದ್ದು, ಇಸ್ಲಾಮಾಬಾದ್ ನೆರೆಯಲ್ಲಿರುವ ಬೃಹತ್ ನಗರವಾಗಿದೆ.

ಸ್ವಾತ್ ಕಣಿವೆಯಲ್ಲಿ ಸೇನೆಯ ಕಾರ್ಯಾಚರಣೆ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ತಾಲಿಬಾನ್ ಎಚ್ಚರಿಕೆ ನೀಡಿದ ಬಳಿಕ ಉಗ್ರಗಾಮಿಗಳಿಂದ ಸತತ ಭಯೋತ್ಪಾದಕ ದಾಳಿಗಳು ನಡೆಯುತ್ತಿದೆ. ಏನೇ ಆದರೂ ತಾಲಿಬಾನ್ ಉಗ್ರರನ್ನು ಮ‌ೂಲೋತ್ಪಾಟನೆ ಮಾಡುವುದಾಗಿ ಪಾಕ್ ಅಧ್ಯಕ್ಷ ಜರ್ದಾರಿ ಶಪಥ ತೊಟ್ಟಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
54 ವಿದ್ಯಾರ್ಥಿಗಳು ಸಾವಪ್ಪಿದ ವರದಿ: ಆಸ್ಟ್ರೇಲಿಯಕ್ಕೆ ಕೃಷ್ಣ
ಆಸ್ಕರ್ ವಿಜೇತ ನಟ ಕಾರ್ಲ್ ಮಾಲ್ಡೆನ್ ನಿಧನ
ಭಾರತೀಯ ಕೈದಿಗಳ ಪಟ್ಟಿ ಪಾಕ್‌ನಿಂದ ಹಸ್ತಾಂತರ
ತಾಲಿಬಾನ್ ಕಮಾಂಡರ್ ಫಜಲುಲ್ಲಾಗೆ ಗಾಯ
ಕತಾರ್‌ನಲ್ಲಿ ದೋಣಿ ದುರಂತ: 30 ಸಾವು?
ಆಸ್ಟ್ರೇಲಯಾಕ್ಕೆ ಭೇಟಿ ನೀಡಲಿರುವ ಕೃಷ್ಣ