ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಾಜಾದಲ್ಲಿ ಇಸ್ರೇಲ್ ಯುದ್ಧಾಪರಾಧ: ಅಮ್ನೆಸ್ಟಿ ವರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಜಾದಲ್ಲಿ ಇಸ್ರೇಲ್ ಯುದ್ಧಾಪರಾಧ: ಅಮ್ನೆಸ್ಟಿ ವರದಿ
ಇಸ್ರೇಲ್ ಸೇನೆ ಗಾಜಾ ವಿರುದ್ಧ ಕಾರ್ಯಾಚರಣೆಯಲ್ಲಿ ಯುದ್ಧಾಪರಾಧಗಳನ್ನು ಮತ್ತು ದುಸ್ಸಾಹಸದ ದಾಳಿಗಳನ್ನು, ವಿನಾಶಕಾರಿ ಕೃತ್ಯಗಳನ್ನು ಎಸಗಿರುವುದಾಗಿ ಸ್ವತಂತ್ರ ಮಾನವಹಕ್ಕು ರಕ್ಷಣೆ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ತಿಳಿಸಿದೆ. ಅತ್ಯಂತ ನಿಖರತೆಯ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ನೂರಾರು ಪ್ಯಾಲೆಸ್ಟೀನ್ ನಾಗರಿಕರನ್ನು ಕೊಂದಿದ್ದಾರೆ ಮತ್ತು ಕೆಲವರನ್ನು ತೀರಾ ಸಮೀಪದಲ್ಲೇ ಗುಂಡು ಹಾರಿಸಿ ಕೊಂದಿದ್ದಾರೆಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಆರೋಪಿಸಿದೆ.

ಪ್ಯಾಲೆಸ್ಟೀನಿ ಉಗ್ರಗಾಮಿಗಳು ಹಾರಿಸಿದ ರಾಕೆಟ್ ದಾಳಿಯನ್ನು ಕೂಡ ವರದಿಯಲ್ಲಿ ಖಂಡಿಸಿದ್ದು, ನಾಗರಿಕರ ಜೀವಕ್ಕೆ ಅಪಾಯವುಂಟು ಮಾಡಿದ್ದಾಗಿ ಹೇಳಿದ್ದಾರೆ. ಕೆಲವು ವೃತ್ತಿಪರ ದೋಷಗಳಿಂದಾಗಿ ನಾಗರಿಕರು ಸತ್ತಿದ್ದಾರೆಂದು ಇಸ್ರೇಲ್ ಈ ಆರೋಪಕ್ಕೆ ಸಮಜಾಯಿಷಿ ನೀಡಿದೆ. 2008ರ ಡಿಸೆಂಬರ್ 27ರಿಂದ 2009ರ ಜ.17ರವರೆಗೆ 22 ದಿನಗಳ ಇಸ್ರೇಲ್ ಕಾರ್ಯಾಚರಣೆಯಲ್ಲಿ 1400 ಪ್ಯಾಲೆಸ್ತೀನಿಯರು ಹತರಾಗಿದ್ದಾರೆಂದು ಅಮ್ನೆಸ್ಟಿ ತಿಳಿಸಿದ್ದು,ಸತ್ತವರನ್ನು ಕುರಿತ ಪ್ಯಾಲೆಸ್ಟೀನ್ ಅಂಕಿಅಂಶಗಳನ್ನು ಒಪ್ಪಿದೆ.

ಅವರಲ್ಲಿ 900ಕ್ಕಿಂತ ಹೆಚ್ಚು ಜನರು ನಾಗರಿಕರಾಗಿದ್ದು, 300 ಮಕ್ಕಳು ಮತ್ತು 115 ಮಹಿಳೆಯರು ಸೇರಿದ್ದಾರೆಂದು ಅದು ಹೇಳಿದೆ. ಮನೆಗಳು, ವಾಣಿಜ್ಯ ಕಟ್ಟಡಗಳು ಮತ್ತು ಸಾರ್ವಜನಿಕ ಕಟ್ಟಡಗಳ ಧ್ವಂಸವು ಉದ್ದೇಶಪೂರ್ವಕವಾಗಿದ್ದು, ಮಿಲಿಟರಿ ಅಗತ್ಯದ ನೆಲೆಯಲ್ಲಿ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಾಕ್ಸನ್ ಮರಣಪತ್ರ: ಕುಟುಂಬದ ಟ್ರಸ್ಟ್‌ಗೆ ಎಸ್ಟೇಟ್
ರಾವಲ್ಪಿಂಡಿಯಲ್ಲಿ ಬಾಂಬ್ ಸ್ಫೋಟಕ್ಕೆ 6 ಬಲಿ
54 ವಿದ್ಯಾರ್ಥಿಗಳು ಸಾವಪ್ಪಿದ ವರದಿ: ಆಸ್ಟ್ರೇಲಿಯಕ್ಕೆ ಕೃಷ್ಣ
ಆಸ್ಕರ್ ವಿಜೇತ ನಟ ಕಾರ್ಲ್ ಮಾಲ್ಡೆನ್ ನಿಧನ
ಭಾರತೀಯ ಕೈದಿಗಳ ಪಟ್ಟಿ ಪಾಕ್‌ನಿಂದ ಹಸ್ತಾಂತರ
ತಾಲಿಬಾನ್ ಕಮಾಂಡರ್ ಫಜಲುಲ್ಲಾಗೆ ಗಾಯ