ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ವಿರುದ್ಧ ಸೇನೆಯ ಕಾರ್ಯಾಚರಣೆಯಲ್ಲಿ ತಾಲಿಬಾನ್ ಮುಖಂಡ ಮೌಲಾನಾ ಫಜಲುಲ್ಲಾ ಹತನಾಗಿರಬಹುದೆಂದು ಮಾಧ್ಯಮದ ವರದಿ ಗುರುವಾರ ತಿಳಿಸಿದೆ. ಭದ್ರತಾಪಡೆಗಳು ಫಜಲುಲ್ಲಾ ದೂರವಾಣಿ ಕರೆಯನ್ನು ಪತ್ತೆಹಚ್ಚಿದ್ದು, ಇನ್ನಷ್ಟು ದಾಳಿಗಳನ್ನು ನಡೆಸುವಂತೆ ತನ್ನ ಕಮಾಂಡರ್‌ಗಳಿಗೆ ಆದೇಶ ನೀಡುತ್ತಿದ್ದನೆಂದು ನ್ಯೂಸ್ ಇಂಟರ್‌ನ್ಯಾಷನಲ್ ತಿಳಿಸಿದೆ.
ಸುದ್ದಿ ಪೋರ್ಟಲ್ ಫಝಲುಲ್ಲಾ ಸ್ವಾತ್ ಕಾರ್ಯಾಚರಣೆಯಲ್ಲಿ ಸತ್ತಿರಬಹುದೆಂದು ಶಂಕಿಸಿದ್ದು, ಅದರ ವಾದ ದೃಢೀಕರಣಕ್ಕೆ ಸರ್ಕಾರಿ ಅಧಿಕಾರಿಗಳ ಅಥವಾ ಸರ್ಕಾರಿ ಮೂಲಗಳನ್ನು ಉದಾಹರಿಸಲಿಲ್ಲ.
ಸ್ವಾತ್‌ನಲ್ಲಿ ಉಗ್ರಗಾಮಿ ಕಮಾಂಡರ್ ಇರಬಹುದೆಂದು ಅವನ ಕರೆಯಿಂದ ಸುಳಿವು ಸಿಕ್ಕಿದ್ದು, ಭದ್ರತಾಪಡೆಗಳು ಅವನ ಉಪಗ್ರಹ ವ್ಯವಸ್ಥೆ ಮೇಲೆ ಗುರಿಯಿರಿಸಿದೆ. ಫಜಲುಲ್ಲಾ ಫೋನ್ ಕದ್ದಾಲಿಕೆಯಲ್ಲಿ ' ತನ್ನ ಸುತ್ತ ಭದ್ರತಾಪಡೆಗಳು ಮುತ್ತಿಗೆ ಹಾಕಿದ್ದು, ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದಾನೆಂದು' ವರದಿಯಾಗಿದೆ. |