ಪಾಪ್ ಕಿಂಗ್ ಮೈಕೇಲ್ ಜಾಕ್ಸನ್ ಅವರು ತಮ್ಮ ಆಘಾತಕಾರಿ ಬಾಲ್ಯ ಮಕ್ಕಳಿಗೆ ಪುನರಾವರ್ತನೆಯಾಗದಂತೆ ಎಚ್ಚರವಹಿಸಿ ಪಾಪ್‌ರಂಗದಿಂದ ದೂರವಿಟ್ಟಿದ್ದರು ಮತ್ತು ತಮ್ಮ ತಂದೆ ಜೋಯಿ ಜಾಕ್ಸನ್ ವಶಕ್ಕೆ ಮಕ್ಕಳನ್ನು ಯಾವುದೇ ಕಾರಣಕ್ಕೂ ಒಪ್ಪಿಸಬಾರದೆಂದು ಹೇಳಿದ್ದರು. ಆದರೆ ಮೈಕೇಲ್ ತಂದೆ ಜೋಯಿ ಜಾಕ್ಸನ್ ಅವರು ತಮ್ಮದೇ ದಾರಿ ಹುಡುಕಿಕೊಂಡಿದ್ದು, ಈಗ ಜಗತ್ತಿನ ಎದುರು 'ಜಾಕ್ಸನ್ ತ್ರೀ'ಯ ದರ್ಶನವಾಗಬಹುದು. ದಂತಕತೆ ಪುತ್ರ ಜತೆ ಅಹಿತಕಾರಿ ಸಂಬಂಧ ಹೊಂದಿದ್ದ ಜೋಯಿ ಜಾಕ್ಸನ್ ತಮ್ಮನ್ನು ಅತೀವವಾಗಿ ಹಿಂಸಿಸಿದರೆಂದು ಮೈಕೇಲ್ ದೂರಿದ್ದರು ಮತ್ತು ಮಕ್ಕಳನ್ನು ತಮ್ಮ ತಂದೆ ಸುಪರ್ದಿಗೆ ಯಾವುದೇ ಕಾರಣಕ್ಕೂ ನೀಡಬಾರದೆಂದು ಹೇಳಿದ್ದರು. ಆದರೆ ಪಾಪ್ ಗಾಯಕನ ಮೂರು ಮಕ್ಕಳಾದ 12 ವರ್ಷದ ಪ್ರಿನ್ಸ್ ಮೈಕೇಲ್, 11 ವರ್ಷದ ಪ್ಯಾರಿಸ್ ಕ್ಯಾಥರೀನ್ ಮತ್ತು ಬ್ಲಾಂಕೆಟ್ ಅವರ ಜತೆ ವಿಶ್ವಪ್ರವಾಸ 'ಜಾಕ್ಸನ್ ತ್ರೀ' ಹಮ್ಮಿಕೊಳ್ಳಲಿದ್ದಾರೆಂದು ಸನ್ ಆನ್‌ಲೈನ್ ವರದಿ ಮಾಡಿದೆ.ಪಾಪ್ ಗಾಯಕ ಮೈಕೇಲ್ ಅವರ ಅನಧಿಕೃತ ಜೀವನಚರಿತ್ರೆಯ ಲೇಖಕರಾದ ಐಯಾನ್ ಹಾಲ್ಪೆರ್‌ಲಿನ್ ತಮ್ಮ 'ಮೈಕೆಲ್ ಜಾಕ್ಸನ್ ಅವರ ಅಂತಿಮ ವರ್ಷಗಳು: ಬಹಿರಂಗ' ಎಂಬ ಶಿರೋನಾಮೆಯ ಪುಸ್ತಕದಲ್ಲಿ ಕುಟುಂಬದ ಇತರೆ ಜನರ ವಿರೋಧದ ನಡುವೆಯೂ ಮೊಮ್ಮಕ್ಕಳಿಗೆ ಪ್ರದರ್ಶನ ವೃತ್ತಿಜೀವನವನ್ನು ಜೋಯಿ ಯೋಜಿಸಿದ್ದಾರೆಂದು ತಿಳಿಸಿದರು. ಮಕ್ಕಳು 2010ರಲ್ಲಿ ವಿಶ್ವಯಾತ್ರೆ ಕೈಗೊಳ್ಳಲು ಜೋಯ್ ಬಯಸಿದ್ದಾರೆ.ಮೈಕೇಲ್ ಇಬ್ಬರು ಮಕ್ಕಳಿಗೆ ರೆಕಾರ್ಡಿಂಗ್ ಗುತ್ತಿಗೆಗಳನ್ನು ನೀಡುವ ಪ್ರಸ್ತಾಪವನ್ನು ಜೋಯ್ ಮಾಡಿದ್ದಾರೆ. ಈಗ ವಿಶ್ವದ ಅತ್ಯುತ್ತಮ ಹಿನ್ನೆಲೆ ಬ್ಯಾಂಡ್‌ನೊಂದಿಗೆ ಜಾಕ್ಸನ್ ತ್ರೀ ಹೆಸರಿನಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಜೋಯ್ ಬಯಸಿದ್ದಾಗಿ ಹ್ಯಾಲ್ಪೆರಿನ್ ಬರೆದಿದ್ದಾರೆ.ಮೈಕೇಲ್ ಸಂಗೀತ ವೃತ್ತಿಜೀವನವನ್ನು ಆರಂಭಿಸಿದ 'ಜಾಕ್ಸನ್ ಫೈವ್' ಗುಂಪಿಗೆ ಜೋಯ್ ಜಾಕ್ಸನ್ ಅವರು ವ್ಯವಸ್ಥಾಪಕರಾಗಿದ್ದರು. |