ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಬೂಲ್: ವಿ.ಸಂ ಅತಿಥಿಗೃಹಕ್ಕೆ ತಾಲಿಬಾನ್ ದಾಳಿ, 9ಸಾವು (Taliban, Kabul, United Nation, Explosions)
Feedback Print Bookmark and Share
 
ವಿಶ್ವ ಸಂಸ್ಥೆಯ ಸಿಬ್ಬಂದಿಗಳು ತಂಗಿದ್ದ ಅತಿಥಿ ಗೃಹ ಒಂದಕ್ಕೆ ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ಆರು ಮಂದಿ ವಿಶ್ವಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯನ್ನು ಬುಧವಾರ ನಸುಕಿನಲ್ಲಿ ನಡೆಸಲಾಗಿದೆ.

ಈ ದಾಳಿಯ ಜವಾಬ್ದಾರಿಯನ್ನು ಒಪ್ಪಿಕೊಂಡಿರುವ ತಾಲಿಬಾನ್ ವಕ್ತಾರ ಜಬಿಯುಲ್ಲ ಮಜಾಹಿದ್, ಇದು ಮುಂಬರುವ ಅಧ್ಯಕ್ಷೀಯ ಚುನಾವಣೆಯನ್ನು ವಿರೋಧಿಸಿ ನಡೆಸಿರುವ ದಾಳಿ ಎಂಬುದಾಗಿ ಹೇಳಿದ್ದಾನೆ.

ಸ್ಥಳೀಯ ಕಾಲಮಾನ 6.30ರ ವೇಳೆಗೆ ಈ ದಾಳಿ ನಡೆಸಲಾಗಿದ್ದು, ಭಾರೀ ಗುಂಡಿನ ಸದ್ದು ನಗದರ ಬೀದಿಯಲ್ಲಿ ಮಾರ್ದನಿಸಿದ್ದು, ನಗರವಿಡೀ ಹೊಗೆಯಿಂದ ತುಂಬಿತ್ತು. ನಾಲ್ವರಿಂದ ಐದು ಮಂದಿಯನ್ನು ಹೊಂದಿದ್ದ ಉಗ್ರರ ತಂಡವು ಯದ್ವಾತದ್ವಾ ಗುಂಡು ಹಾರಿಸಿದ್ದು, ವಿಶ್ವಸಂಸ್ಥೆಯ ಕಟ್ಟಡಕ್ಕೆ ಬೆಂಕಿ ಹಚ್ಚಿದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾಬೂಲ್ ಪೊಲೀಸ್ ಮುಖ್ಯಸ್ಥ ಅಬ್ದುಲ್ ರಹ್ಮಾನ್ ಅವರು ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ. ವಿಶ್ವಸಂಸ್ಥೆಯ ಸಿಬ್ಬಂದಿಗಳು ಸಾವನ್ನಪ್ಪಿರುವ ವಿಚಾರವನ್ನು ವಿಶ್ವಸಂಸ್ಥೆಯ ವಕ್ತಾರ ಅಡ್ರಿಯನ್ ಎಡ್ವರ್ಡ್ಸ್ ದೃಢಪಡಿಸಿದ್ದಾರೆ. ಅತಿಥಿ ಗೃಹದಲ್ಲಿ 20 ಮಂದಿ ಸಿಬ್ಬಂದಿಗಳು ನೊಂದಾಯಿತವಾಗಿದ್ದರೂ, ದಾಳಿಯ ಸಮಯದಲ್ಲಿ ಎಷ್ಟು ಮಂದಿ ಅತಿಥಿಗೃಹದಲ್ಲಿ ಇದ್ದರೆಂಬುದು ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಮೂರು ದಿನಗಳ ಹಿಂದೆ ತಾಲಿಬಾನ್ ನೀಡಿರುವ ಹೇಳಿಕೆಯಲ್ಲಿ ಅಧ್ಯಕ್ಷ ಹಮೀದ್ ಕರ್ಜಾಯಿ ಮತ್ತು ಅಬ್ದುಲ್ಲಾ ಅಬ್ದುಲ್ಲಾ ನಡುವಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಾದರೂ ಕೆಲಸ ಮಾಡುವುದರ ವಿರುದ್ಧ ಬೆದರಿಕೆ ಹಾಕಿತ್ತು. ನವೆಂಬರ್ 7ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ