ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್ ಚರ್ಚುಗಳಲ್ಲಿ ಭಾರತೀಯ ಕ್ರೈಸ್ತರಿಗೆ ಸ್ವಾಗತವಿಲ್ಲ (Indian Christian | UK church | Kerala | India)
Bookmark and Share Feedback Print
 
ಹೌದು, ಭಾರತದಿಂದ ಲಕ್ಷಗಳ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವ ಭಾರತೀಯ ಕ್ರೈಸ್ತರಿಗೆ ಬ್ರಿಟನ್‌ನಲ್ಲಿನ ಚರ್ಚುಗಳು ತಾಂಬೂಲ ನೀಡಿ ಸ್ವಾಗತಿಸುತ್ತಿಲ್ಲ. ಇದನ್ನು ಸ್ವತಃ ಭಾರತೀಯರೇ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ತಮಗೆಂದು ಪ್ರತ್ಯೇಕ ಚರ್ಚುಗಳನ್ನೂ ಅವರು ಸ್ಥಾಪಿಸಿಕೊಂಡಿದ್ದಾರೆ.

ಅಂದಾಜುಗಳ ಪ್ರಕಾರ ಪ್ರಸಕ್ತ ಇಂಗ್ಲೆಂಡ್‌ನಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದು, ಅವರಲ್ಲಿ ಬಹುಸಂಖ್ಯೆಯಲ್ಲಿರುವವರು ಕ್ರೈಸ್ತರು. ಇವರು ತಮ್ಮ ಇಚ್ಛೆಯಂತೆ ಹಿಂದಿ, ಗುಜರಾತಿ, ತಮಿಳು, ಪಂಜಾಬಿ, ಮಲಯಾಳಂ ಅಥವಾ ಇನ್ನಿತರ ಭಾರತೀಯ ಭಾಷೆಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಬ್ರಿಟನ್ ಚರ್ಚುಗಳು ಅವಕಾಶ ನೀಡುತ್ತಿಲ್ಲ.

ಇದರಿಂದಾಗಿ ಭಾರತೀಯ ಸಮುದಾಯಗಳು ಪ್ರತ್ಯೇಕ ಚರ್ಚುಗಳನ್ನು ಸ್ಥಾಪಿಸುವುದು ಅನಿವಾರ್ಯವಾಯಿತು ಎನ್ನುತ್ತಾರೆ ಚರ್ಚ್ ಸಂಘಟನೆಯೊಂದರ ಮುಖ್ಯಸ್ಥರು. ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಇಂತಹ ಸಣ್ಣ ಚರ್ಚುಗಳನ್ನು ಬ್ರಿಟನ್‌ನಾದ್ಯಂತ ಅಸ್ತಿತ್ವಕ್ಕೆ ತರಲಾಗಿದೆ. ಬಹುತೇಕ ಭಾರತೀಯರು ತಮ್ಮ ಪ್ರಾರ್ಥನೆಗಳಿಗಾಗಿ ಇದೇ ಚರ್ಚುಗಳಿಗೆ ಆಗಮಿಸುತ್ತಾರೆ ಎಂದು ಏಷಿಯನ್ ಸಮುದಾಯದ ಸದಸ್ಯ ಹಾಗೂ ದಕ್ಷಿಣ ಏಷಿಯಾ ವೇದಿಕೆಯ ಅಧ್ಯಕ್ಷ ರಾಮ್ ಗಿಡೂಮಾಲ್ ವಿವರಿಸಿದ್ದಾರೆ.

ಭಾರತೀಯ ಉಪಖಂಡದ ಸುಮಾರು 75,000 ಕ್ರೈಸ್ತರು ಬ್ರಿಟನ್‌ನಲ್ಲಿದ್ದಾರೆ. ಅವರಲ್ಲಿ ಬಹುತೇಕ ಮಂದಿಗೆ ಇಲ್ಲಿನ ಮುಖ್ಯವಾಹಿನಿಯ ಚರ್ಚುಗಳಲ್ಲಿ ಸಮಾಧಾನ ಸಿಗುತ್ತಿಲ್ಲ. ಅವರು ಅಲ್ಲಿ ಸಂತೃಪ್ತರಾಗುತ್ತಿಲ್ಲ. ನಮ್ಮದೇ ಆದ ಚರ್ಚುಗಳಲ್ಲಿ ನಾವು ದೋಲು ಮುಂತಾದ ಪರಿಕರಗಳನ್ನು ಬಳಸಿ ನಮ್ಮದೇ ರೀತಿಯಲ್ಲಿ ನಮ್ಮಗೇ ಭಾಷೆಗಳಲ್ಲಿ ಹಾಡುತ್ತಾ ಪ್ರಾರ್ಥನೆ ಸಲ್ಲಿಸುತ್ತೇವೆ. ಇದಕ್ಕೆ ಮುಖ್ಯವಾಹಿನಿ ಚರ್ಚುಗಳು ಪ್ರೋತ್ಸಾಹ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಭಿನ್ನ ಸಂಸ್ಕೃತಿಗಳಿಂದ ಬರುವ ಕ್ರೈಸ್ತರನ್ನು ಇಲ್ಲಿನ ಮುಖ್ಯವಾಹಿನಿಯ ಚರ್ಚುಗಳು ಸ್ವಾಗತಿಸುವ ಅಗತ್ಯವಿದೆ. ಇಲ್ಲಿ ಕೆಲವು ಚರ್ಚುಗಳು ಒಂದು ಅಥವಾ ಎರಡು ಹಿಂದಿ ಅಥವಾ ತಮಿಳು ಗೀತೆಗಳನ್ನು ಹಾಡಲು ಅವಕಾಶ ನೀಡುತ್ತಿವೆ. ಆದರೂ ಏಷಿಯಾದ ಬಹುತೇಕ ಕ್ರೈಸ್ತರು ಇಲ್ಲಿ ಸ್ವಾಗತಾರ್ಹ ವಾತಾವರಣವನ್ನು ಕಾಣುತ್ತಿಲ್ಲ ಎನ್ನುವುದು ಅವರ ಅಭಿಪ್ರಾಯ.
ಸಂಬಂಧಿತ ಮಾಹಿತಿ ಹುಡುಕಿ