ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಕಾರ್ ಬಾಂಬ್ ಸ್ಫೋಟಕ್ಕೆ 20 ಬಲಿ (Car bombing | Pakistan | al-Qaida | gas station | kills 20)
ಗ್ಯಾಸ್ ಸ್ಟೇಶನ್ ಹೊರಭಾಗದಲ್ಲಿ ಕಾರ್ ಬಾಂಬ್‌ವೊಂದು ಸ್ಫೋಟಿಸಿದ ಪರಿಣಾಮ 20 ಮಂದಿ ಸಾವನ್ನಪ್ಪಿ, ನೂರಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಫೈಸಲಾಬಾದ್ ನಗರದಲ್ಲಿ ಮಂಗಳವಾರ ನಡೆದಿದೆ.

ಪಾಕಿಸ್ತಾನದ 3ನೇ ಪ್ರಮುಖ ನಗರವಾದ ಫೈಸಲಾಬಾದ್‌ ಕೈಗಾರಿಕಾ ಪ್ರದೇಶವಾಗಿದ್ದು, ಇಲ್ಲಿ ವಾಣಿಜ್ಯ, ಪೊಲೀಸ್ ಹಾಗೂ ಸರಕಾರಿ ಕಟ್ಟಡಗಳಿವೆ.

ಸ್ಫೋಟದಿಂದಾಗಿ ಗ್ಯಾಸ್ ಸ್ಟೇಶನ್ ಹಾಗೂ ಪಾಕಿಸ್ತಾನ ಸರಕಾರಿ ಸ್ವಾಮಿತ್ವದ ವಿಮಾನಯಾನ ಕಚೇರಿಗೂ ಸಾಕಷ್ಟು ಹಾನಿಯಾಗಿದೆ. ಆದರೆ ಉಗ್ರರು ಯಾವುದನ್ನು ಗುರಿಯಾಗಿರಿಸಿ ಈ ದಾಳಿ ನಡೆಸಿದ್ದಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಮೂರು ವರ್ಷಗಳಿಂದ ಇಸ್ಲಾಮಿಸ್ಟ್ ಉಗ್ರರು ಪೊಲೀಸ್, ಆರ್ಮಿ ಹಾಗೂ ಜನಸಾಮಾನ್ಯರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿದ್ದಾರೆ.

ಸ್ಫೋಟದಲ್ಲಿ ಸುಮಾರು 20 ಮಂದಿ ಬಲಿಯಾಗಿದ್ದು, ಇದು ಭಯೋತ್ಪಾದನಾ ಕೃತ್ಯವಾಗಿದೆ ಎಂದು ಫೈಸಲಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಅಫ್ತಾಬ್ ಚೀಮಾ ತಿಳಿಸಿದ್ದಾರೆ.
ಇವನ್ನೂ ಓದಿ