ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 12 ಶಾಲಾ ಮಕ್ಕಳ ನಿರ್ದಯ ಕೊಲೆ; ಬ್ರೆಜಿಲ್‌ನಲ್ಲಿ ನೀರವ ಮೌನ (schoolchildren | Brazil | gunman | 9/11 attacks)
ಶಾಲೆಯೊಂದಕ್ಕೆ ದಾಳಿ ನಡೆಸಿದ್ದ ಬಂದೂಕುಧಾರಿಯೊಬ್ಬ 12 ಶಾಲಾ ಮಕ್ಕಳನ್ನು ನಿರ್ದಯವಾಗಿ ಕೊಲೆ ಮಾಡಿದ ನಂತರ ಸ್ವತ: ತಾನೂ ಗುಂಡಿಗೆ ಶರಣಾದ ಘಟನೆ ಬ್ರೆಜಿನ್‌ನಲ್ಲಿ ನಡೆದಿದೆ.

ಟಾಸ್ಸೊ ಡಾ ಸಿನ್ವೆರಿಯಾ ಪಬ್ಲಿಕ್ ಸ್ಕೂಲ್‌ಗೆ ದಾಳಿ ನಡೆಸಿದ್ದ ಬಂದೂಕುಧಾರಿಯನ್ನು 23ರ ಹರೆಯದ ವಿಲ್ಲಿಂಗ್ಟನ್ ಒಲಿವೇರಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇತರ 12 ಮಕ್ಕಳು ಗಾಯಾಳುವಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಒಲಿವೇರಾ ಮಾನಸಿಕ ಅಸಮತೋಲನದ ಸಮಸ್ಯೆ ಎದುರಿಸುತ್ತಿದ್ದರು. ಸದಾ ಕಂಪ್ಯೂಟರ್‌ನಲ್ಲಿ ಫೈಯರಿಂಗ್ ವಿಡಿಯೋಗಳನ್ನು ನೋಡುತ್ತಿರುವ ಈತ 9/11 ರಂದು ಅಮೆರಿಕಾದ ವಾಣಿಜ್ಯ ಕೇಂದ್ರಕ್ಕೆ ನಡೆದಿದ್ದ ಉಗ್ರರ ದಾಳಿಯಿಂದ ಅತೀವ ಆಕರ್ಷಿತನಾಗಿದ್ದ.

ಒಟ್ಟಿನಲ್ಲಿ ಈತ ನಡೆಸಿದ್ದ ಹುಡುಗಾಟಕ್ಕೆ ಮಕ್ಕಳು ತಮ್ಮ ಜೀವವನ್ನು ತೆರುವಂತಾಗಿದೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಹೆತ್ತವರಲ್ಲಿ ದುಃಖ ಮಡುಗಟ್ಟಿದ್ದು, ಅವರ ಪಾಡು ಹೇಳತೀರದಾಗಿದೆ.
ಇವನ್ನೂ ಓದಿ